ಬಿ.ಸಿ.ರೋಡ್ ನ ಕಟ್ಟಡವೊಂದರ ಕೊಠಡಿಯಲ್ಲಿ ಗುರುವಾರ ಹಣದ ಸುರಿಮಳೆಯಾಗಿದೆ. ಕೊಠಡಿಯಿಂದ ಹಣ ಬೀಳುವುದನ್ನು ಕಂಡ ಜನರು ಹಣವನ್ನು ಹೆಕ್ಕಲು ಮುಗಿಬಿದ್ದು ಕೆಲಕಾಲ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಬಿ.ಸಿ.ರೋಡ್ ನ ಕಟ್ಟಡದಲ್ಲಿ ನಡೆಯುತ್ತಿದ್ದ ರಿಕ್ರಿಯೇಶನ್ ಕ್ಲಬ್ ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ಪೋಲಿಸರಿಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ ಪೋಲಿಸ್ ಅಧೀಕ್ಷಕರ ಅನುಮತಿ ಪಡೆದು ಪೋಲಿಸ್ ನಿರೀಕ್ಷಕ ವಿವೇಕಾನಂದ
ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು. ಆಗ ಪೋಲಿಸ್ ರನ್ನು ನೋಡಿದ ತಕ್ಷಣ ಹಣವನ್ನು ಕಿಟಕಿಯ ಹೊರಗೆ ಎಸೆದರು. ಇದನ್ನು ಕಂಡ ಜನರು ಹಣವನ್ನು ಹೆಕ್ಕಲು ಮುಂದಾದರು. ಪೋಲಿಸರು ಆರೋಪಗಳನ್ನು ಬಂಧಿಸಿ, 26,900 ರೂ. ವಶಕ್ಕೆ ಪಡೆದುಕೊಂಡಿದ್ದಾರೆ.














