Coastal Bulletin

ಬಂಟ್ವಾಳ :ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ "ಮಾತುಗಾರಿಕೆ ಒಂದು ಕಲೆ"ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ಇತ್ತೀಚೆಗೆ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರುನಲ್ಲಿ ನಡೆಯಿತು.

ಜೆಸಿಐ ತರಬೇತುದಾರ, ಘಟಕದ ಪೂರ್ವಾಧ್ಯಕ್ಷ ರಾಮಚಂದ್ರ ರಾವ್ ಕಾರ್ಯಾಗಾರವನ್ನು ಉದ್ಘಾಟಿಸಿ,ಉತ್ತಮ ಮಾತುಗಾರಿಕೆಯು ನಿಮ್ಮ ಭವಿಷ್ಯವನ್ನು ನಿರ್ಣಯಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾತನಾಡಿ ಜೇಸಿ ಸಂಸ್ಥೆಯಿಂದ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದುಕೊಂಡು ಸಮಾಜದ ಉತ್ತಮ ವ್ಯಕ್ತಿಗಳಾಗಬೇಕು ಎಂದು ಶುಭ ಹಾರೈಸಿದರು.

ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ,

ಜೇಸಿಐ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ಉಪಸ್ಥಿತರಿದ್ದರು.

ಜೇಸಿಐ ವಲಯ ತರಬೇತುದಾರ ಶಿವಪ್ರಕಾಶ್ ಜೈನ್ ಮತ್ತು ರವೀಂದ್ರ ಕುಕ್ಕಾಜೆ ಬಹಳ ಉತ್ತಮವಾದ ರೀತಿಯಲ್ಲಿ ಕಾರ್ಯಾಗಾರ ನಡೆಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.

ಕಾರ್ಯಕ್ರಮದಲ್ಲಿ ಜೇಸಿ ಡಾ. ವಿನಾಯಕ್, ಜೇಸಿ. ರಮ್ಯ ವಿನಾಯಕ್ ಮತ್ತಿತರರು ಭಾಗವಹಿಸಿದರು. ಶ್ರೇಯಾ ಸ್ವಾಗತಿಸಿ, ಶ್ರೀಜಾ ವಂದಿಸಿದರು. ರಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment