ಬಂಟ್ವಾಳ :ಇಲ್ಲಿನ ಮೆರಮಜಲು ಗ್ರಾಮದ ಅಬ್ಬೆಟ್ಟು ವಿದ್ಯಾ ಯುವಕ ಮಂಡಲ(ರಿ )ವಿದ್ಯಾನಗರ ಇದರ 31ನೇ ವಾರ್ಷಿಕೋತ್ಸವವು ಶನಿವಾರ ಅಬ್ಬೆಟ್ಟು ವಿದ್ಯಾನಗರದಲ್ಲಿ ನಡೆಯಲಿದೆ.
ಅದೇ ದಿನ ಬೆಳಿಗ್ಗೆ ಗಂಟೆ 9ಕ್ಕೆ ಸಂಘದ ಕಟ್ಟಡದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.11ಗಂಟೆಯಿಂದ 12ಗಂಟೆಯ ತನಕ ಶ್ರೀ ರಾಜ ರಾಜೇಶ್ವರಿ ಭಜನಾ ಮಂಡಳಿ ಪೊಳಲಿ ಇವರಿಂದ ಭಜನಾ ಕಾರ್ಯಕ್ರಮ.ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6ಕ್ಕೆ ಚೌಕಿ ಪೂಜೆ ನಡೆದು
ರಾತ್ರಿ 12ಗಂಟೆಯ ತನಕ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನ ಬಯಲಾಟ ನಡೆಯಲಿಕ್ಕಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸರ್ವರೂ ಪ್ರೀತಿಪೂರ್ವಕವಾಗಿ ಆಗಮಿಸಬೇಕೆಂದು ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.















