ಬಂಟ್ವಾಳ :ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ,ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ರಿ,ಉಜಿರೆ ಇದರ ರಜತಪರ್ವ- ಶತಕ ತಾಳಮದ್ದಳೆ ಸಪ್ತಾಹ ಸರಣಿ ಜ.4ರಿಂದ 10ತನಕ ಬಿ. ಸಿ. ರೋಡಿನ ಹೋಟೆಲ್ ರಂಗೋಲಿ ಸಭಾಭಾವನದಲ್ಲಿ ನಡೆಯಲಿದೆ.
ಜ.4ರಂದು ಸಂಜೆ 4.45ಕ್ಕೆ ತಾಳಮದ್ದಳೆ ಸಪ್ತಾಹಕ್ಕೆ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರು, ಹಿರಿಯ ನ್ಯಾಯವಾದಿಗಳಾದ ಬಿ.ಗಣೇಶಾನಂದ ಸೋಮಯಾಜಿಯವರು ದೀಪ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ, 'ದಶಾವತಾರಿ' ಕೆ.ಗೋವಿಂದ
ಭಟ್* ಡಾ.ಎಂ.ಪ್ರಭಾಕರ ಜೋಶಿ ಹಾಗೂ ಸದಾನಂದ ಶೆಟ್ಟಿ ರಂಗೋಲಿ ಉಪಸ್ಥಿತರಿರುವರು.
ಬಳಿಕ ಅಂಗದ ಸಂಧಾನ ಪ್ರಸಂಗ ತಾಳಮದ್ದಳೆ ನಡೆಯಲಿದೆ ಎಂದು ಸಂಚಾಲಕ ಉಜಿರೆ ಅಶೋಕ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ರಿ.ಮುಡಿಪು ಸಹಕಾರ ನೀಡುತ್ತಿದೆ.














