ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ಸಾಥ್

Coastal Bulletin
ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ಸಾಥ್

ಮಂಗಳೂರಿನಲ್ಲಿ ದಸರಾ (Mangaluru Dasara) ಹಿನ್ನೆಲೆ ಮಿಥುನ್ ರೈ ಅವರು ಆಯೋಜಿಸಿದ್ದ `ಪಿಲಿನಲಿಕೆ’ (Pilinalike) ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆದಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep), ಬಾಲಿವುಡ್ ನಟಿ ಪೂಜಾ ಹೆಗ್ಡೆ, ಕ್ರಿಕೆಟಿಗ ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.

ದಸರಾ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಹುಲಿಕುಣಿತ ಮಾಡಿತ್ತು. ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತುಂಬಾ ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ

ಪ್ರತಿಭೆಗೆ ಮನಸೋತ ಝೈದ್ ಖಾನ್, ಆತನಿಗೆ 50,000 ರೂ. ಹಣ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಝೈದ್ ಖಾನ್ ಅವರು ನಾಯಕನಾಗಿ ನಟಿಸುತ್ತಿರುವ `ಕಲ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.

Leave a Comment