Coastal Bulletin

ಬಂಟ್ವಾಳ :ಇತ್ತೀಚೆಗೆ ನಿಧನರಾದ ಕಾರ್ಮಿಕ ನಾಯಕ ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕಾ. ಡೊಂಬಯ್ಯ ಮೂಲ್ಯರಿಗೆ ಕರ್ನಾಟಕ ರಾಜ್ಯ ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಒಕ್ಕೂಟ (ರಿ )ಇದರ ಬಂಟ್ವಾಳ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆಯಂದು ಶ್ರದ್ಧಾಂಜಲಿ ಕಾರ್ಯಕ್ರಮವು ನಡೆಯಿತು.

ಶ್ರೀ ಗುರುಚೈತನ್ಯ ಸೇವಾಶ್ರಮ ಗುಂಡೂರಿ ಇಲ್ಲಿ ಆಶ್ರಮವಾಸಿಗಳಿಗೆ ಅನ್ನದಾನ ಹಾಗೂ ಸವಲತ್ತುಗಳನ್ನು ನೀಡುವುದರ ಮೂಲಕ ಅರ್ಥ ಪೂರ್ಣವಾಗಿ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.

ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸದ್ಗತಿಗಾಗಿ ಮೌನ ಪ್ರಾರ್ಥನೆ ನಡೆಸಲಾಯಿತು.ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶೇಷಪ್ಪ ಮೂಲ್ಯ, ವೇದಿಕೆ ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಆಶ್ರಮದ ಮುಖ್ಯಸ್ಥರಾದ ಹೊನ್ನಯ್ಯ ಕಾಟಿಪಳ್ಳ ನುಡಿನಮನದ ಸಲ್ಲಿಸಿದರು.

ಮೃತರ ಮನೆಯವರು ಗುರುಚೈತನ್ಯ ಸೇವಾಶ್ರಮಕ್ಕೆ ರೂ 5000 ಸಹಾಯಧನವನ್ನು ಮೃತರ ಸ್ಮರಣಾರ್ಥವಾಗಿ ಈ

ಸಂದರ್ಭದಲ್ಲಿ ನೀಡಿದರು.

ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಾದ ವಿಠ್ಠಲ ಪಲ್ಲಿಕಂಡ, ಕಿಶೋರ್ ಬಂಗೇರ, ಪುನೀತ್ ಕಾಮಾಜೆ, ಕಾರ್ತಿಕ್ ಮಯ್ಯರಬೈಲು, ಪುನೀತ್ ಭಂಡಾರಿ ಬೆಟ್ಟು, ಪ್ರದೀಪ್ ಪಲ್ಲಮಜಲು, ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್, ಪದ್ಮನಾಭ ನಾವೂರ, ಹಾಗೂ ತುಂಬೆ ಕುಲಾಲ ಸೇವಾಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್ ಮೃತರ ಮಕ್ಕಳಾದ ಶ್ರೀಮತಿ ಅಕ್ಷತಾ, ಶ್ರೀಮತಿ ಮನ್ವಿತಾ ಬಂಧುಗಳಾದ ಶಶಿಧರ್ ಸಾಲಿಯಾನ್, ಸುಜಿತ್ ಕುಮಾರ್ ಉಪಸ್ಥಿತರಿದ್ದರು. ವೇದಿಕೆ ಕಾರ್ಯದರ್ಶಿ ನಿತೀಶ್ ಕಾಮಾಜೆ ಸ್ವಾಗತಿಸಿ, ವಂದಿಸಿದರು.

Leave a Comment