ಬಂಟ್ವಾಳ: 2023 ರ ಧರ್ಮ ಯುದ್ದಕ್ಕೆ ಕಾರ್ಯಕರ್ತರು ಸಿದ್ದರಾಗಿ, ವಿಜಯದ ಪತಾಕೆ ಹಾರಿಸಲು ಒಂದಾಗಿ ಕಾರ್ಯಪ್ರವೃತ್ತರಾಗಿ, ಬಿಜೆಪಿ ಮಾಡಿದ ಸಾಧನೆಗಳ ರಿಪೋರ್ಟ್ ಕಾರ್ಡ್ ಮೂಲಕ ಜನರ ಮನಸ್ಸು ಗೆಲ್ಲುವುದರ ಜೊತೆಗೆ ಬಿಜೆಪಿಯನ್ನು ಗೆಲ್ಲಿಸಿ ಎಂದು ರಾಜೇಶ್ ನಾಯ್ಕ್ ತಿಳಿಸಿದರು.
ಗೋಳ್ತಮಜಲು ಗ್ರಾಮಪಂಚಾಯತ್ ವ್ಯಾಪ್ತಿಯ ಗೋಳ್ತಮಜಲು, ಅಮ್ಟೂರು ಭಾಗದ ಪ್ರಮುಖ ಮನೆಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.
ಬಿಜೆಪಿ ಪಕ್ಷದ ಸಿದ್ದಾಂತದಡಿಯಲ್ಲಿ ಪಕ್ಷದ ನಿಷ್ಠೆ ಹಾಗೂ ಹಿರಿಯರ ಮಾತುಗಳಿಗೆ ಬೆಲೆ ಬರುವ ರೀತಿಯಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಶಕ್ತಿ ನೀಡುವ , ಮತದಾರರಿಗೆ ಗೌರವ ತರುವ ರೀತಿಯಲ್ಲಿ ನೀವು ನೀಡಿದ ಮತಕ್ಕೆ ಕುಂದು ಬರದ ರೀತಿಯಲ್ಲಿ ಅತ್ಯಂತ ನಿಷ್ಠೆಯಿಂದ ಶಾಸಕತ್ವದ ಪ್ರಥಮ ಅವಧಿಯನ್ನು ಮುಗಿಸಿದ್ದೇನೆ.
ಮತ್ತೊಮ್ಮೆ ಪಕ್ಷ ನನಗೆ ಅವಕಾಶ ನೀಡಿದೆ, ಕ್ಷೇತ್ರದ ಮತದಾರರ ನನ್ನ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ ವಿಶ್ವಾಸದ ಮೇಲೆ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ನಿಮ್ಮ ಕ್ಷೇತ್ರದ ಸೇವಕನಾಗಿ ಮತ್ತೆ ಮುಂದುವರಿಯಲು ಅವಕಾಶ ನೀಡಿ ವಿಧಾನಸಭೆಗೆ ಕಳುಹಿಸಿತ್ತೀರಿ ಎಂಬ ನಂಬಿಕೆ ಇದೆ.
ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಜಾತಿಜಾತಿ ನಡುವೆ ವಿಷಬೀಜ ಬಿತ್ತಿ ಅಶಾಂತಿ ಹಬ್ಬಿ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಶಾಂತಿಯ ಬಂಟ್ವಾಳವನ್ನು ನೋಡಿ ಸಹಿಸಲು ಸಾಧ್ಯವಾಗದೆ
ಅಪಪ್ರಚಾರದಲ್ಲಿ ತೊಡಗಿದೆ.
ಕಾಂಗ್ರೇಸ್ ಪಕ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಮತ್ತು ಬಿಜೆಪಿ ಅವಧಿಯಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಗಳ ತುಲನೆ ಮಾಡಿದರೆ ಇವರ ಸುಳ್ಳಿನ ಕಂತೆಗಳಿಗೆ ಉತ್ತರ ಸಿಗುತ್ತದೆ ಎಂದು ಅವರು ತಿಳಿಸಿದರು.ನಾನು ಕಳೆದ ಐದು ವರ್ಷಗಳಲ್ಲಿ 2 ಸಾವಿರಕ್ಕಿಂತ ಮೇಲ್ಪಟ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು,ಇದನ್ನು ಸಹಿಸಲಾರದೆ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಾದವಮಾವೆ, ಎಸ್.ಸಿ .ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಗ್ರಾ.ಪಂ. ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಸದಸ್ಯರಾದ ರಾಜೇಶ್ ಕೊಟ್ಟಾರಿ, ಲಖಿತ ಆರ್ ಶೆಟ್ಟಿ, ಲೀಲಾವತಿ, ಎಲಿಯಾಸ್ ಡಿಸೋಜ , ಗೋಪಾಲಕೃಷ್ಣ ಪೂವಳ,ಜಯಂತ ಗೌಡ,ಸುಷ್ಮಾ, ಕಸ್ತೂರಿ ಪ್ರಭು, ಕ್ಷೇತ್ರದ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರಮುಖರಾದ ವಿಶ್ವನಾಥ ಆಳ್ವ, ನಾಗೇಶ್ ಕೆ, ವಿಶ್ವನಾಥ ಕೊಟ್ಟಾರಿ, ಚಿದಾನಂದ ಪಟ್ಟೆಕೋಡಿ,ಉದಯ ಮಡ್ಲನಜಲು, ವಿಠಲ ಪ್ರಭು,ನಿತಿನ್ ,ಮತ್ತಿತರರು ಉಪಸ್ಥಿತರಿದ್ದರು.















