ಬಂಟ್ವಾಳ : ಕೊಡಮಣ್ಣು ಕಾಂತಪ್ಪ ಶೆಟ್ಟಿ ಓರ್ವ ವ್ಯಕ್ತಿಯಾಗಿರದೆ ಈ ಊರಿನ ಶಕ್ತಿಯಾಗಿದ್ದರು, ತನ್ನ ಊರು ಸಮಾಜವನ್ನು ಬೆಳೆಸುತ್ತ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿ ಮಾದರಿಯಾಗಿ ಬುದುಕಿ ಇತರರಿಗೆ ಪ್ರೇರಣೆಯಾದರು, ಕೆನರಾ ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಕಾಂತಪ್ಪಣ್ಣ ಪಾತ್ರವೂ ಕೂಡ ಮಹತ್ವದ್ದು, ಕೆನರಾ ಕಾಲೇಜು ಹಾಗೂ ಕಾಂತಪ್ಪಣ್ಣನವರದ್ದು 30 ವರ್ಷದ ಅವಿನಾಭಾವ ಸಂಬಂಧ ಅವರ ಜೀವನವೇ ನಮಗೆಲ್ಲ ಆದರ್ಶ, ಅವರ ಹೆಸರಲ್ಲಿ ವಿದ್ಯಾನಿಧಿ ಸ್ಥಾಪಿಸಿದ್ದಲ್ಲಿ ನಮ್ಮ ಸಹಕಾರ ಕೂಡ ಇದೆ ಎಂದು ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೇಜಮ್ಮ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಕೆನರಾ ಕಾಲೇಜು ಮಂಗಳೂರು ಇವರಿಂದ ಕೊಡ್ಮಾಣ್ ಸರಕಾರಿ ಶಾಲೆಯಲ್ಲಿ ನಡೆಯುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿಯವರಿಗೆ "ನುಡಿ ನಮನ" ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ಶೇಟ್ ಮಾತನಾಡಿ,ಕೊಡಮಣ್ಣು ಕಾಂತಪ್ಪ ಶೆಟ್ಟಿಯವರ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಡೋಣ, ವಾರ್ಷಿಕ ವಿಶೇಷ ಶಿಬಿರದಲ್ಲಿ ಉತ್ತಮ ಶಿಬಿರಾರ್ಥಿಯಾಗಿ ಆಯ್ಕೆಯಾದ ವಿದ್ಯಾರ್ಥಿಗೆ ಕೊಡಮಣ್ಣು ಕಾಂತಪ್ಪ ಶೆಟ್ಟಿಯವರ
ಹೆಸರಿನಲ್ಲಿ ಒಂದು ಸಾವಿರ ರೂಪಾಯಿಯನ್ನು ಪ್ರತಿ ವರ್ಷ ಕೊಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.
ಶಿಬಿರದಲ್ಲಿ ಹಳೇ ವಿದ್ಯಾರ್ಥಿಗಳಾದ ಪವನ್ ಹಾಗೂ ಅತಿಕ್ ಕುಮಾರ್ ಕಾಂತಪ್ಪಣ್ಣ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮೆರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ಶಿಬಿರಾಧಿಕಾರಿಗಳಾದ ಸೀಮಾ ಪ್ರಭು, ಕೀರ್ತನ ಭಟ್, ಶುಭಮ್ ಕುಲಾಲ್ ಉಪಸ್ಥಿತರಿದ್ದರು.
ಪ್ರಮುಖರಾದ ವಿನೋದ್ ಕುಮಾರ್ ಮಣ್ಣಗುಡ್ಡ, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಗೋಪಾಲ್ ಗೋವಿಂತೋಟ,ಹರೀಶ್ ಕುಮಾರ್ ಕೊಡ್ಮಾಣ್,ಮತ್ತಿತರರು ಉಪಸ್ಥಿತರಿದ್ದರು. ಶಿಬಿರಾರ್ಥಿ ಲಿಖಿತ್ ಕಾರ್ಯಕ್ರಮ ನಿರೂಪಿಸಿದರು.









