ತುಂಬೆ : "ಗಂಗಾಭಿನಂದನೆ" ಕೆ ಎನ್ ಗಂಗಾಧರ ಆಳ್ವರ ಸೇವಾ ನಿವೃತ್ತಿ,ಬೀಳ್ಕೊಡುಗೆ ಸಮಾರಂಭ. ನಿಸ್ವಾರ್ಥ, ಪ್ರಾಮಾಣಿಕ ಸೇವೆಗೆ ಸಮಾಜದಿಂದ ಗೌರವ: ಯು ಟಿ ಖಾದರ್

Coastal Bulletin
ತುಂಬೆ : "ಗಂಗಾಭಿನಂದನೆ" ಕೆ ಎನ್ ಗಂಗಾಧರ ಆಳ್ವರ ಸೇವಾ ನಿವೃತ್ತಿ,ಬೀಳ್ಕೊಡುಗೆ ಸಮಾರಂಭ. ನಿಸ್ವಾರ್ಥ, ಪ್ರಾಮಾಣಿಕ ಸೇವೆಗೆ ಸಮಾಜದಿಂದ ಗೌರವ: ಯು ಟಿ ಖಾದರ್

ಬಂಟ್ವಾಳ :ಜನ ಸಾಮಾನ್ಯರಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಕೊಡುಗೆ ಕೊಟ್ಟ ಬಿ ಎ ಶಿಕ್ಷಣ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಸುದೀರ್ಘ ಸೇವೆಗೈದ ಗಂಗಾಧರ ಆಳ್ವರ ಬಿಳ್ಕೊಡುಗೆಯೊಂದಿಗೆ ನಮ್ಮ ಮಣ್ಣಿನ ಸಂಸ್ಕೃತಿ ಆಚಾರ ವಿಚಾರಗಳ ಪರಂಪರೆಯನ್ನು ಭವಿಷ್ಯಕ್ಕೆ ವರ್ಗಯಿಸಿ ನೆನಪಿನಲ್ಲಿ ಉಳಿಯುವಂತ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ ಎನ್ ಗಂಗಾಧರ ಆಳ್ವರು 32 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದ "ಗಂಗಾಭಿನಂದನಾ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

32 ವರ್ಷಗಳ ಕಾಲ ಸದಾ ಎಲ್ಲಾ ಶಿಕ್ಷಕರಿಗೆ, ಯುವಕರಿಗೆ ಮಾದರಿಯಾಗಿ ತನ್ನ ಜ್ಞಾನ ಭಂಡಾರವನ್ನು ಪ್ರೀತಿ ವಿಶ್ವಾಸದಿಂದ ವಿದ್ಯಾರ್ಥಿಗಳಿಗೆ ವರ್ಗಯಿಸಿ ನಿಸ್ವಾರ್ಥ ಪ್ರಾಮಾಣಿಕ ಸೇವೆ ಸಲ್ಲಿಸಿದರ ಪಲವಾಗಿ ಇಂದು ಸಮಾಜ ಅವರನ್ನು ಗುರುತಿಸಿದೆ, ಅವರ ಸಮಾಧಾನ,ತಾಳ್ಮೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸಾಮಾಜಿಕ ಕಳಕಳಿಯುಳ್ಳ ಉತ್ತಮ ನಡೆ ನುಡಿಯ ಎಲ್ಲರಿಗೂ ಪ್ರೀತಿ ಪಾತ್ರರಾದ ಬುದ್ದಿವಂತ ವ್ಯಕ್ತಿ ಗಂಗಾಧರ ಆಳ್ವರು ತನ್ನ ಪ್ರೌಡಿಮೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದವರು, ವೃತ್ತಿಯಲ್ಲಿ ನಿವೃತ್ತರಾದರೂ ಪ್ರವೃತ್ತಿಯಲ್ಲಿ ಇನ್ನು ಹೆಚ್ಚಿನ ಶೇಯಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ, ಪ್ರಾಂಶುಪಾಲರಾದ ಕೆ ಎನ್ ಗಂಗಾಧರ ಆಳ್ವ, ಮನುಷ್ಯನಿಗೆ ಅಭಿಮಾನದಿಂದ ಕೊಟ್ಟ ಗೌರವ ಯಾವತ್ತೂ ಮರೆಯಲು ಸಾಧ್ಯವಿಲ್ಲ, ನಿಸ್ವಾರ್ಥದಿಂದ ದುಡಿದವನಿಗೆ ದೇವರ ಅನುಗ್ರಹ ಖಂಡಿತ ಇದೆ, 32 ವರ್ಷದ ವೃತ್ತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದು ನುಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಒಳ್ಳೆಯ ಶಿಕ್ಷಣನಿಗೆ ವೃತ್ತಿ ಪ್ರೀತಿ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರೀತಿ ಇರಬೇಕು , ಎರಡು ಗುಣವನ್ನು ಮೈಗೂಡಿಸಿದವರು ಗಂಗಾಧರ ಆಳ್ವರು

ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ ಎ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, 32 ವರ್ಷಗಳ ಸುದೀರ್ಘ ಸೇವೆಯಿಂದ ಸಂಸ್ಥೆಯ ಘನತೆ ಗೌರವವನ್ನು ಹೆಚ್ಹಿಸಿದ್ದೀರಿ,ನಿಮ್ಮ ಸಲಹೆ ಮಾರ್ಗದರ್ಶನ ಸಂಸ್ಥೆಯ ಮೇಲೆ ಸದಾ ಇರಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ ಎಲ್ ನರೇಂದ್ರ ನಾಯಕ್ ಶುಭ ಹಾರೈಸಿದರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ ಡಿ ಜಯಣ್ಣ, ಮಾಜಿ ಜಿ ಪಂ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ,ಬಿ ಎ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ ಎಂ ಅಶ್ರಫ್, ತುಂಬೆ ಗ್ರಾ ಪಂ ಅಧ್ಯಕ್ಷ ಗಣೇಶ್ ಸಾಲಿಯಾನ್, ಜ್ಯೋತಿಷಿ ಅನಿಲ್ ಪಂಡಿತ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್, ಮೋಹಿನಿ ಸುವರ್ಣ ,ಜಯಾನಂದ ಸುವರ್ಣ ಉಪಸ್ಥಿತರಿದ್ದರು.

ಪ್ರಮುಖರಾದ ಕೃಷ್ಣ ಕುಮಾರ್ ಪೂಂಜ, ಹರೀಶ್ ಆಚಾರ್ಯ,ದೇವಸ್ಯ ಪ್ರಕಾಶ್ಚಂದ್ರ ಆಳ್ವ, ಚಂದ್ರಹಾಸ ಶೆಟ್ಟಿ ರಂಗೋಲಿ,ಅಶ್ವಿನ್ ಕುಮಾರ್ ರೈ ಬಿ ಸಿ ರೋಡ್,ಮಹಮ್ಮದ್ ವಲವೂರ್,ಪ್ರಕಾಶ ಶೆಟ್ಟಿ ಶ್ರೀ ಶೈಲ, ಸದಾಶಿವ ಡಿ ತುಂಬೆ, ಪ್ರವೀಣ್ ಬಿ ತುಂಬೆ, ರಾಮಚಂದ್ರ ಸುವರ್ಣ,ಉಮೇಶ್ ಶೆಟ್ಟಿ ಬರ್ಕೆ, ದೇವದಾಸ ಶೆಟ್ಟಿ ಕೊಡ್ಮಾಣ್,ಗೋಪಾಲ್ ಗೋವಿಂತೋಟ, ಅರ್ಜುನ ಪೂಂಜ, ಮತ್ತಿತರರು ಉಪಸ್ಥಿತರಿದ್ದರು,

ದಿನೇಶ್ ಶೆಟ್ಟಿ ಅಳಿಕೆ ಪ್ರಸ್ತವಿಕವಾಗಿ ಮಾತನಾಡಿದರು, ನಿಯೋಜಿತ ಪ್ರಾಂಶುಪಾಲ ವಿ ಸುಬ್ರಮಣ್ಯ ಭಟ್ ಸ್ವಾಗತಿಸಿ, ಕಚೇರಿ ಅಧಿಕ್ಷಕ ಅಬ್ದುಲ್ ಕಬೀರ್ ಧನ್ಯವಾದವಿತ್ತರು, ಕವಿತಾ ದೇವದಾಸ ಅರ್ಕುಳ ಹಾಗೂ ನೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a Comment