ಪಾಣೆಮಂಗಳೂರು: ಶ್ರೀ ಭಯಂಕೇಶ್ವರ ದೇವಸ್ಥಾನ ಇಂದಿನಿಂದ ಬ್ರಹ್ಮಕಲಶೋತ್ಸವ ಸಂಭ್ರಮ.

Coastal Bulletin
ಪಾಣೆಮಂಗಳೂರು: ಶ್ರೀ ಭಯಂಕೇಶ್ವರ ದೇವಸ್ಥಾನ ಇಂದಿನಿಂದ ಬ್ರಹ್ಮಕಲಶೋತ್ಸವ ಸಂಭ್ರಮ.

ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ ಸಾನಿಧ್ಯ ಪುನರ್ ನವೀಕರಣಗೊಂಡಿದ್ದು, ಇದೇ 3ರಿಂದ ಮೊದಲ್ಗೊಂಡು 12ರತನಕ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಹೇಳಿದ್ದಾರೆ.

ಇಲ್ಲಿನ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಮಾರು 700 ವರ್ಷಗಳ ಹಿನ್ನೆಲೆ ಹೊಂದಿರುವ ದೇವಸ್ಥಾನವು ಕಾರಣಿಕ ಕ್ಷೇತ್ರವಾಗಿದ್ದು, ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಭಕ್ತರು ಸ್ವಯಂ ಶ್ರಮದಾನ ಮತ್ತು ಭಜನೆ ನಡೆಸುತ್ತಿದ್ದಾರೆ. ನೇತ್ರಾವತಿ ನದಿಯಿಂದ ಭಕ್ತರು ತೀರ್ಥ ತಂದು ಶಿವ ವಿಗ್ರಹಕ್ಕೆ ತಂತ್ರಿವರ್ಯರ ಮೂಲಕ ಅಭಿಷೇಕ ಸಲ್ಲಿಸುವುದು ಇಲ್ಲಿನ ವಿಶೇಷತೆ ಎಂದು ಅವರು ತಿಳಿಸಿದರು.

5ರಂದು ಹೊರೆಕಾಣಿಕೆ:

ಇದೇ 5ರಂದು ನರಿಕೊಂಬು ಗ್ರಾಮ ಪಂಚಾಯಿತಿ ಸಮೀಪದ ನಾಲ್ಕೈತ್ತಾಯ ದೈವಸ್ಥಾನ ಬಳಿ ಆಕರ್ಷಕ ಹೊರೆಕಾಣಿಕೆ ಹೊರಟು ಪಾಣೆಮಂಗಳೂರು ಪೇಟೆ

ಮೂಲಕ ಇಲ್ಲಿಗೆ ಬರಲಿದೆ. ಬ್ರಹ್ಮಕಲಶೋತ್ಸವದಂದು ವಿವಿಧ ಭಜನಾ ತಂಡಗಳಿಂದ ನೃತ್ಯಭಜನೆ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಧಾಮರ್ಿಕ ಸಭೆ, ಭಜನೆ, ನಾಟಕ, ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಎನ್.ಪ್ರಕಾಶ ಕಾರಂತ, ಬಿ.ರಘು ಸಪಲ್ಯ, ಲೋಕೇಶ ಕೆ., ಪದ್ಮನಾಭ ಮಯ್ಯ ಏಲಬೆ, ಬಿ.ರಾಮಚಂದ್ರ ರಾವ್, ಭುವನೇಶ ಮೊಗನರ್ಾಡು, ಚಂದ್ರಾವತಿ ನಾಯ್ಕ, ಗೋವಿಂದ ಪೈ, ಕೃಷ್ಣರಾಜ ಭಟ್, ಪ್ರೇಮನಾಥ ಶೆಟ್ಟಿ, ಪ್ರಕಾಶ ಕೋಡಿಮಜಲು, ಪುರುಷೋತ್ತಮ ಬಂಗೇರ ನಾಟಿ, ಪುರುಷೋತ್ತಮ ಸಾಲ್ಯಾನ್, ವೇದವ ಗಾಣಿಗ ಮತ್ತಿತರರು ಇದ್ದರು.

Leave a Comment