ಕ್ರಿಶ್ಚಿಯನ್ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ,ಪ್ರಕರಣ ದಾಖಲು.

Coastal Bulletin
ಕ್ರಿಶ್ಚಿಯನ್ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ,ಪ್ರಕರಣ ದಾಖಲು.

ಮಂಗಳೂರು: ಕ್ರಿಶ್ಚಿಯನ್ ಚರ್ಚ್ ಧರ್ಮಗುರುವೊಬ್ಬರು ಹಾಡಹಗಲೇ ವೃದ್ಧ ದಂಪತಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದ ಎರ್ಮೆತ್ತಡ್ಕ ಎಂಬಲ್ಲಿ ಘಟನೆ ನಡೆದಿದೆ. ಗುರುವಾರ (ಫೆಬ್ರವರಿ 29 ರಂದು) ಬೆಳಗ್ಗೆ ಈ ಘಟನೆ ನಡೆದಿದೆ.

ಮನೆಲ ಚರ್ಚ್ ನ ಧರ್ಮಗುರು ಫಾದರ್​ ನೆಲ್ಸನ್ ಓಲಿವೆರಾ ಹಲ್ಲೆ ನಡೆಸಿದ ಪಾದ್ರಿ ಎಂದು ತಿಳಿದುಬಂದಿದೆ. ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ. ಸದರಿ ಪಾದ್ರಿ ಆ ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆ ಶುದ್ದಗೊಳಿಸುವ ನಿಮಿತ್ತ ಫಾದರ್ ನೆಲ್ಸನ್ ಓಲಿವೆರಾ ಅವರು ಗ್ರೆಗರಿ ಮೊಂತೆರೋ ಮನೆಗೆ ಭೇಟಿ

ನೀಡಿದ್ದರಂತೆ. ಆ ವೇಳೆ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದಿರುವ ಬಗ್ಗೆ ಚರ್ಚೆಯಾಗಿದೆ. ಮಾತಿಗೆ ಮಾತು ಬೆಳೆದು ವೃದ್ಧ ದಂಪತಿಯನ್ನು ಎಳೆತಂದು ಫಾದರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.ಇನ್ನು ಭಾರೀ ಆಕ್ರೋಶದ ಬೆನ್ನಲ್ಲೇ ವೃದ್ಧ ದಂಪತಿಗೆ ಹಲ್ಲೆ ಮಾಡಿದ ಕ್ಯಾಥೊಲಿಕ್ ಚರ್ಚ್ ಪಾದ್ರಿಯನ್ನು‌ ಮಂಗಳೂರು ಡಯಾಸಿಸ್ ಹುದ್ದೆಯಿಂದ ತೆರವುಗೊಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave a Comment