Coastal Bulletin

ಬಂಟ್ವಾಳ : ಓಂ ಶ್ರೀ ಗೆಳೆಯರ ಬಳಗ (ರಿ) ನರಿಕೊಂಬು ಇದರ 17ನೇ ವಾರ್ಷಿಕೋತ್ಸವ ಸಮಾರಂಭವು ಮಾ.4 ರಂದು ಶನಿವಾರ ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ವಠಾರದಲ್ಲಿ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆ ನಡೆಯಲಿದ್ದು ಪ್ರಸಾದ ವಿತರಣೆಯ ನಂತರ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು ಸಂಜೆ 6 ಗಂಟೆಗೆ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ನಾಯಿಲ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ನಡೆಯಲಿದೆ.

ರಾತ್ರಿ 7:00 ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಸಹಿತ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ನಂತರ ರಾತ್ರಿ 9 ಗಂಟೆಗೆ ತಾಂಬೂಲ ಕಲಾವಿದರು ಇವರಿಂದ ತುಳು ಹಾಸ್ಯಮಯ ನಾಟಕ "ಪರಿಮಳ ಕಾಲನಿ"ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment