Coastal Bulletin

ಮಂಗಳೂರು: ಜೆಸಿಐ ಮಂಗಳೂರು ಸ್ಪೂರ್ತಿ ಇದರ 2022 ರ ಸಾಲಿನ ಘಟಕಾಧ್ಯಕ್ಷರಾಗಿ ಜೆಸಿ ಸುಮನ ಪೊಳಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ನಿರ್ಗಮಿತ ಘಟಕಾಧ್ಯಕ್ಷ ಜೆಸಿ ಅನನ್ಯ ಹೆಗ್ಡೆ ಪ್ರಮಾಣವಚನ ಬೋಧಿಸಿದರು.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸ್ಮಾರ್ಟಸಿಟಿ ಜನರಲ್ ಮ್ಯಾನೇಜರ್ (ತಾಂತ್ರಿಕ) ಅರುಣ್ ಪ್ರಭ, ಗೌರವ ಅತಿಥಿಗಳಾಗಿ ಜೆಸಿಐ ಬಾರತದ ಪ್ರತಿಷ್ಟಿತ ವಲಯ 15ರ ವಲಯಾಧ್ಯಕ್ಷ ಜೆಸಿಐ ಸೆನೆಟರ್ ಜೆಸಿ ರಾಯನ್ ಉದಯ್ ಕ್ರಾಸ್ತ, ವಲಯ ಉಪಾಧ್ಯಾಕ್ಷರಾದ ಜೆಸಿ ಹರೀಶ್ ಯು. ಶೇಟ್, ಜೇಸಿ

ಸ್ವಾತಿ ಜೆ. ರೈ, ಜೆಸಿ ಅನುಷ್ ಚಂದ್ರ ಉಪಸ್ತಿತರಿದ್ದರು. ವಲಯದ ಹಲವಾರು ಗಣ್ಯರ ಸಮ್ಮುಖದಲ್ಲಿ ಹೊಸ ಸದಸ್ಯರು ಜೆಸಿಐ ಗೆ ಸೇರ್ಪಡೆಗೊಂಡರು.

ಸಮಾರಂಭದಲ್ಲಿ ಪೂರ್ವ ವಲಯಾಧ್ಯಕ್ಷ ಸೆನೆಟರ್ ಕುಮಾರಣ್ಣ, ಜೆಸಿಐ ಮಂಗಳೂರು ಸಾಮ್ರಾಟ್ ಇದರ ಸ್ಥಾಪಕಾಧ್ಯಕ್ಷ ಜೆಸಿಐ ಸೆನೆಟರ್ ಜೆಸಿ ಡಾ.ಎನ್.ರಾಘವೇಂದ್ರ ಹೊಳ್ಳ, ಉಪಸ್ಥಿತರಿದ್ದರು.

Leave a Comment