ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.) ಬ್ರಹ್ಮರಕೂಟ್ಲು ಇದರ 54ನೇ ವರ್ಷದ ಏಕಹಾ ಭಜನಾ ಮಹೋತ್ಸವವು ಜನವರಿ 06, 07ಮತ್ತು 08ರಂದು ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಲಿದೆ.
ಜ.6 ಮಂಗಳವಾರ ಬೆಳಿಗ್ಗೆ ಗಣಹೋಮ, ಮೂಕಾಂಬಿಕಾ ದೇವಿಗೆ ಬೆಳ್ಳಿ ಕವಚ ಪ್ರಭಾವಳಿ ಸಮರ್ಪಣೆ, ಸಂಜೆ 6ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮ ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಆಶೀರ್ವಾಚನ ನೀಡಲಿದ್ದಾರೆ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಯಲಿದೆ. ಬಳಿಕ "ಜೋಡು ಜೀಟಿಗೆ"ನಾಟಕ ಪ್ರದರ್ಶನ ಗೊಳ್ಳಲಿದೆ.
ಜ.7ಬುಧವಾರ ಏಕಾಹ
ಭಜನೋತ್ಸವ ಪ್ರಾರಂಭ, ಮದ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ, ಸಂಜೆ 6ರಿಂದ ಶೋಭಯಾತ್ರೆ ಕನಪಾಡಿತ್ತಾಯ ಸನ್ನಿದಿ, ರಾಮಲ್ ಕಟ್ಟೆ, ಬ್ರಹ್ಮರಗುಡಿಗೆ ಭೇಟಿ ನೀಡಿ ಬಳಿಕ ಹಿಂತಿರುಗಿ 9ಗಂಟೆಗೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಹಾಗೂ ರಾತ್ರಿ 12ಕ್ಕೆ ಮಹಾಪೂಜೆ ನಡೆಯಲಿದೆ.
ಜ. 8 ಗುರುವಾರ ಏಕಾಹ ಭಜನೋತ್ಸವದ ಮಂಗಳಾಚಾರಣೆ, ಪ್ರಸಾದ ವಿತರಣೆ, ಸಂಜೆ 6.30ರಿಂದ ಆನಂದ ಭಜನೆ ಜರುಗಲಿದೆ ಎಂದು ಮಂದಿರದ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಟು ಹಾಗೂ ಗೌರವ ಸಲಹೆಗಾರ ನವೀನ ಬಂಗೇರ ಪಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















