ಮಂಗಳೂರು:ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು ಇರುವ ಅನುಮಾನದ ಮೇಲೆ ಮಾಜಿ ಶಾಸಕ ದಿವಂಗತ ಬಿ.ಎಂ ಇದಿನಬ್ಬ ಪುತ್ರ ಬಿ.ಎಂ ಭಾಷಾ ನ ಮನೆಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೆ, ಇದಿನಬ್ಬ ನ ಮೊಮ್ಮಗನ ಪತ್ನಿ ದೀಪ್ತಿ ಅಲಿಯಾಸ್ ಮರಿಯಾಂ ನನ್ನು ಬಂಧಿಸಲಾಗಿದೆ.
ಮಂಗಳೂರು ಹೊರವಲಯದಲ್ಲಿದ್ದ ಮನೆಗೆ ದಾಳಿನಡೆಸಿ ,ಶೋಧ ಕಾರ್ಯ ನಡೆಸಿದ್ದಾರೆ. ಬಿ.ಎಂ ಭಾಷಾ ಅವರ ಸೊಸೆ ದೀಪ್ತಿ ಅವರನ್ನು ವಿಚಾರಣೆ ಮಾಡಿ ,ಅವರನ್ನು ಬಂಧಿಸಿದ್ದಾರೆ.
ಅಕ್ಟೋಬರ್ 4ರಂದು ಬಿ.ಎಂ ಭಾಷಾ
ರವರ ಕಿರಿಯ ಪುತ್ರನಾದ ಅಬ್ದುಲ್ ರೆಹಮಾನ್ ನ ಮನೆಗೆ ದಾಳಿ ನಡೆಸಿ,ಅವರನ್ನು ಬಂಧಿಸಲಾಗಿತ್ತು.ಇದೀಗ ಬಿ.ಎಂ ಭಾಷಾ ರ ಮತ್ತೊಬ್ಬ ಪುತ್ರ ಅನಾಸ್ ಅವರ ಪತ್ನಿ ದೀಪ್ತಿ ಯನ್ನು ಬಂಧಿಸಲಾಗಿದೆ














