ಬಂಟ್ವಾಳ :ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಇದರ ತಾಲೂಕು ಘಟಕದ ವಾರ್ಷಿಕ ಕ್ರೀಡಾಕೂಟವು ನ. 1ರಂದು ಸ್ಪರ್ಶ ಕಲಾ ಮಂದಿರ ಬಿ ಸಿ ರೋಡ್ ನಲ್ಲಿ ಜರುಗಿತು.
ಕ್ರೀಡಾಕೂಟವನ್ನು ಬಂಟ್ವಾಳ ತಾಲೂಕು ತಹಶೀಲ್ದಾರರಾದ ಡಿ ಅರ್ಚನಾ ಭಟ್ ಉದ್ಘಾಟಿಸಿ ಶುಭ ಹಾರೈಸಿರು, ಅಧ್ಯಕ್ಷತೆಯನ್ನು ತಾಲೂಕು ಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ ನಾಗೇಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಆಗಮಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಪ್ರಮುಖರಾದ ನಾರಾಯಣ ಬಿಎ,ಸುರೇಶ್ ಸಾಲಿಯಾನ್, ವಿದ್ಯಾ ಶೆಟ್ಟಿ, ಮೋಹನ್ ಎಸ್ ಕೊಡಿ, ಸುಧಾಕರ ಆಚಾರ್ಯ ಸುನೀಲ್ ಅಪೂರ್ವ,
ಪ್ರಶಾಂತ್ ಕೋಟ್ಯಾನ್, ಅರುಣ್ ರೋಷನ್ ಡಿಸೋಜಾ, ಚಕ್ರಸ್ ಅಮೀನ್, ಸುಂದರ ಪೂಜಾರಿ ಬೋಳಂಗಡಿ, ಅಶ್ವಿನ್ ಕುಮಾರ್ ರೈ, ಪ್ರಜ್ವಲ್ ಕುಮಾರ್ ವಿ,ದೇಜಪ್ಪ ಪೂಜಾರಿ, ಸೋಮಪ್ಪ ಪೂಜಾರಿ, ರಾಜೇಂದ್ರ. ಭಾರತಿ ಶ್ರೀಧರ್ ರಾಮ್, ಗೋಪಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರ.ಕಾರ್ಯದರ್ಶಿ ಯಾದೇಶ್ ತುಂಬೆ ಸ್ವಾಗತಿಸಿ ತುಳಸಿ ಆರ್ ಧನ್ಯವಾದವಿತ್ತರು, ಎ ವಸಂತ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು















