ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ, ನೆತ್ತರಕೆರೆ. ಇಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದಂತ ಸಭಾ ವೇದಿಕೆ ಹಾಗೂ ಮೂರು ಸುಸಜ್ಜಿತ ಕೊಠಡಿ , ಶಾಲೆಯ ಎದುರಿನ ಸ್ವಾಗತ ಕಮಾನುಗಳ ಲೋಕಾರ್ಪಣಾ ಕಾರ್ಯಕ್ರಮವು ಗುರುವಾರ ಬೆಳಗ್ಗೆ ನಡೆಯಲಿದೆ.
ನವೋದಯ ಮಿತ್ರ ಕಲಾವೃಂದ (ರಿ )ನೆತ್ತರಕೆರೆ ಈ ಸಂಸ್ಥೆಯು ಶಾಲೆಯನ್ನು ದತ್ತು ಪಡೆದುಕೊಂಡ ನಂತರ ಶಾಲೆಯಲ್ಲಿ ಆಂಗ್ಲ ಭಾಷಾ ಕಲಿಕೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲ್ ಕೆಜಿ -ಯುಕೆಜಿ ತರಗತಿಯನ್ನು ಪ್ರಾರಂಭಿಸಿ ಎರಡು ಗೌರವ ಶಿಕ್ಷಕಿಯರನ್ನು ನೇಮಿಸಿದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿತು.ಹೀಗೆ ನಿರಂತರ ಅಭಿವೃದ್ಧಿ
ಕಾರ್ಯಗಳನ್ನು ಈ ಸಂಸ್ಥೆಯು ಮಾಡಿ ಇದೀಗ ದಾನಿಗಳ ನೆರವಿನಿಂದ ಮೂರು ಸುಸಜ್ಜಿತ ಕೊಠಡಿ ಹಾಗೂ ಸಬಾ ವೇದಿಕೆ,ಶಾಲೆಯ ಆವರಣದ ಸ್ವಾಗತ ಕಮಾನು,ಮಕ್ಕಳು ಕೈಕಾಲು ತೊಳೆಯಲು ನಳ್ಳಿನೀರಿನ ವ್ಯವಸ್ಥೆ. ಬಿಸಿನೀರಿನ ವ್ಯವಸ್ಥೆ, ಆಫೀಸ್ ರೂಮಿನ ನವೀಕರಣ ಹಾಗೂ ಇನ್ನು ಹಲವಾರು ಮೂಲಭೂತ ಸೌಕರ್ಯಗಳು ಅಂದಾಜು 35ಲಕ್ಷ ವೆಚ್ಚ ದಿಂದ ಸಿದ್ದಗೊಂಡಿದೆ.
















