breaking news

Coastal Bulletin

ಬೆಂಗಳೂರು :ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತುರು ಮೋಹನ್ ದಾಸ್ ಶೆಟ್ಟಿ ಅವರ ನ್ನು ಒಳಗೊಂಡ ಒಕ್ಕೂಟದ ನಿಯೋಗ ಕರ್ನಾಟಕ ರಾಜ್ಯ ಉಪ ಮುಖ್ಯ ಮಂತ್ರಿ ಸನ್ಮಾನ್ಯ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ನೂತನ ಉಪಮುಖ್ಯಮಂತ್ರಿ ಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು,

ಬಳಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜದ ಸೇವಾ ಬಗ್ಗೆ ತಿಳಿಸಿದರು, ಬಂಟ ಸಮಾಜಕ್ಕೆ ನಿಗಮ ಸ್ಥಾಪನೆಗೆ ಮನವಿ ಮಾಡಲಾಯಿತು, ಹಾಗೆಯೇ ಬಂಟರ ಮೀಸಲಾತಿಯ ಬಗ್ಗೆ ಕ್ರಮ ಕೈಕೊಂಡು ಬಂಟರ

ಸಮುದಾಯ 3B ಯಿಂದ 2A ಗೆ ಸೇರ್ಪಡೆ ಗೊಳಿಸ ಬೇಕೆಂದು ಒತ್ತಾಯಿಸಲಾಯಿತು.

ಈ ಸಂಧರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ , ಸಂಸದ ಡಿ ಕೆ ಸುರೇಶ್ ಉಪಸ್ಥಿತರಿದ್ದರು.

Leave a Comment