Coastal Bulletin

ಮುಂಬಯಿ : ಮುಂಬಯಿಯ ಉದ್ಯಮಿ, ಮೊಗವೀರ ಬ್ಯಾಂಕಿನ ನಿರ್ದೇಶಕ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಮತ್ತು ಯಶೋದಾ ಎಸ್ ಕಾಂಚನ್ ಇವರ ಪ್ರಯೋಜಕತ್ವದಲ್ಲಿ 17 ದ ಉಪ್ಪಿನ ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಕ್ಕುದ್ರು ವಿದ್ಯಾರ್ಥಿಗಳಿಗೆ ಮತ್ತು ಪರಿಸರದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಯನ್ನು ಯುವಕ ಮಂಡಲ ಉಪ್ಪಿನ ಕುದ್ರು ಇವರ ಆಶ್ರಯದಲ್ಲಿ ಮೇ 28 ರಂದು ರವಿವಾರ ಸಂಜೆ ಉಪ್ಪಿನ ಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು.

ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಖ್ಯಾತ ಉದ್ಯಮಿ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿ ಮಾತನಾಡುತ್ತಾ ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ನಮಗೆ ಬಹಳಷ್ಟು ಕಷ್ಟವಾಗಿತ್ತು ಅಂದಿನ ದಿನಗಳ ಕಷ್ಟಗಳನ್ನು ನೆನಪಿಸಿ, ಸುರೇಶ್ ಕಾಂಚನ್ ರವರು ಈ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪುಸ್ತಕ ವಿತರಣಾ ಗಳೊಂದಿಗೆ ಉಪ್ಪಿನ .ಕುದ್ರು ಜನರಿಗೆ ಉತ್ಸಹದ ಸಂಭ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಅವರ ದುಡಿಮೆಯ ಬಹುಪಾಲನ್ನು ಸಮಾಜಕ್ಕೆ ನೀಡುತ್ತಾ ಋಣ ಸಂದಾಯವನ್ನು ಮಾಡುತ್ತಾ ಬಂದಿದ್ದಾರೆ, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದೆ ಸುರೇಶ್ ಕಾಂಚನರಂತೆ ಮನೋಭಾವನೆಯನ್ನು ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಾಯ ಹಸ್ತವನ್ನು ನೀಡಬೇಕು ಹಾಗಾದಾಗ ಮಾತ್ರ ಈ ಊರು ಜನರು ಅಭಿವೃದ್ಧಿಗೊಳ್ಳುತ್ತಾರೆ ಎಂದು ನುಡಿದರು.

ಬೈಂದೂರಿನ ನೂತನ ಶಾಸಕ  ಗುರುರಾಜ ಗಂಟಿಹೊಳೆ ಅವರನ್ನು ಸನ್ಮಾನಿಸಲಾಯಿತು ,ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಬಹಳ ವರ್ಷಗಳಿಂದ ಈ ಪರಿಸರದ ಅಭಿವೃದ್ಧಿಯ ಕನಸು ಕಂಡವರು ಸುರೇಶ್ ಕಾಂಚನ್ ರವರು ಈ ಗ್ರಾಮದ ಹಲವಾರು ಸಮಸ್ಯೆಗಳಿಗೆ ಸ್ವಂತ ಹಣವನ್ನು ನೀಡಿದರು, ಅಲ್ಲದೆ  ವಿದ್ಯಾರ್ಥಿಗಳ ಭವಿಷ್ಯರೂಪಿಸುವುದಕ್ಕೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ, ನಾನು ಶಾಸಕನಾಗಿ ನನ್ನಿಂದ ಗ್ರಾಮದ ಅಭಿವೃದ್ಧಿಗೆ ಆಗುವ ಪ್ರಯತ್ನಗಳನ್ನ ಎಲ್ಲವನ್ನು ಮಾಡುತ್ತೇನೆ ಎಂದರು

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ ಉನ್ನತ ವ್ಯಾಸಂಗ ಮಾಡುವುದಕ್ಕೆ ಸರಕಾರ ವಿಶೇಷವಾದ ಸೌಲಭ್ಯಗಳನ್ನು ಮಾಡುತ್ತಾ ಬಂದಿದೆ ಮೆರಿಟಿನಿಂದ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಆಗುತ್ತಿದ್ದಾರೆ ,ಇದರ ಪರಿಣಾಮವಾಗಿ ಬಡವರ ಮಕ್ಕಳು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ, ವಿದ್ಯಾರ್ಥಿಗಳು ತಾವು ಹೇಗೆ ಬೆಳೆ ಬೇಕು ಎನ್ನುವುದು ಅವರು ನಿರ್ಧಾರ ಮಾಡುವ ಬೇಕು, ಸರಕಾರ ಯಾವುದೇ ಬಂದರೂ ಕೂಡ ನಮ್ಮೂರಿನ ಜಿ ಶಂಕರ್ ಅವರ ಮಾತುಗಳನ್ನು ಕೇಳುತ್ತಾರೆ ಅಷ್ಟು ಪ್ರಭಾವಿತರಾಗಿದ್ದಾರೆ ಆದ್ದರಿಂದ ಅವರಿಂದ ಮತ್ತು ಅವರ ಸರಕಾರದಿಂದ ಸಮಾಜ ಅಭಿವೃದ್ಧಿಗೊಂಡಿದೆ ಅದೇ ಹಾದಿಯಲ್ಲಿ ನಮ್ಮೂರಿನ ಉದ್ಯಮಿ ಸುರೇಶ್ ಕಾಂಚನ್ ಅವರು ಮುಂಬೈಯಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ಗ್ರಾಮದ ಅಭಿವೃದ್ಧಿಗೆ ಉಪಯೋಗಿಸುತ್ತಿದ್ದಾರೆ ಅವರು ಕನಸುಗಳು, ಸಹಕಾರ ಆಗುವುದಕ್ಕೆ ನಾವೆಲ್ಲರೂ ಸದಾ ಬೆಂಬಲಿಗರಾಗೋಣ ಎಂದು ನುಡಿದರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರೇಶ್ ಕಾಂಚನ್ ರವರು ಮಾತನಾಡುತ್ತಾ ಜಿ  ಶಂಕರ್ ರಂತಹ ಸಾಮಾಜಿಕ ಕಳಕಳಿ ಉಳ್ಳವರು ಈಗ ಗ್ರಾಮಕ್ಕೆ ಬಂದಾಗ ನಮಗೆಲ್ಲರಿಗೂ ಸಂತೋಷ ಸಂಭ್ರಮವಾಗದೆ, ನಮ್ಮ ಗ್ರಾಮದ ಶಾಲೆಗೆ ಪ್ರತಿ ವರ್ಷ ನೂರರಷ್ಟು ಫಲಿತಾಂಶ ಬರಬೇಕು ಅದನ್ನು ಶಾಲಾ ಅಧ್ಯಾಪಕವರಿಂದ ನೋಡಿಕೊಳ್ಳಬೇಕು, ಕಡಿಮೆ ಅಂಕವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾ ನೀಡುವ ಕೆಲಸ ಆಗಬೇಕು, ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದಾಗ ಗ್ರಾಮಕ್ಕೆ ಮತ್ತು ನಮಗೂ ಬಹಳ ಅಭಿಮಾನವಾಗುತ್ತೆ, ತಲ್ಲೂರಿನಿಂದ  ಉಪ್ಪಿನ ಕುದ್ರು ವರೆಗೆ ರಸ್ತೆ ವಿಸ್ತರಣೆ ಆಗುವಲ್ಲಿ ನಮ್ಮ ಶಾಸಕರು ಪ್ರಯತ್ನ ಮಾಡಬೇಕು, ಅದಕ್ಕೆ ಬೇಕಾಗಿದ್ದರೆ ನಾನು ಮತ್ತು ಜಿ ಶಂಕರ್ ಅವರು ಸಹಕಾರ ನೀಡಲು ಸಿದ್ದರಿದ್ದೇವೆ, ಗ್ರಾಮದ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರು ಕೊರತೆ ಇದೆ ಅದನ್ನು ಸರಕಾರ ನಿಭಾಯಿಸಬೇಕು ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ವೇತನವನ್ನು ಸ್ವಂತ ನಾನು ನೀಡುತ್ತಾ ಬಂದಿದ್ದೇನೆ, ಸರಕಾರ ಅಧ್ಯಾಪಕರನ್ನು ನೇಮಕ ಮಾಡುವಂತೆ ಆಗಬೇಕು,, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕೆನ್ನುವ ಕಲ್ಪನೆ ನನ್ನದು ,ನಮ್ಮ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ತೊಂದರೆಗಳನ್ನು ಅನುಭವಿಸಿದ್ದೇನೆ ,ಅದನ್ನು ಇಂದಿನ ವಿದ್ಯಾರ್ಥಿಗಳಿಗೆ ಆಗಬಾರದು ಎನ್ನುವ ಸಂಕಲ್ಪ ನನ್ನದು ಎಂದು ನುಡಿದರು.

Leave a Comment