Coastal Bulletin

ಮಂಗಳೂರು : ಬಂಟ್ವಾಳ ತಾಲೂಕು ಬೆಂಜನ ಪದವಿನ ಶಾಂತಿನಗರ ನಿವಾಸಿ ,ತೀಯ ಸಮಾಜದ ಹಿರಿಯ ನೇತಾರ ಹೋಟೆಲ್ ಉದ್ಯಮಿ ಗೋಪಾಲ ಬೆಲ್ಚಡ (68ವ) ಅಲ್ಪಕಾಲದ ಅಸ್ವಾಸ್ಥ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ,ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಳ್ಳಾಲ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾಗಿದ್ದ ಅವರು ಬೆಂಜನಪದವು ಭದ್ರಕಾಳಿ ದೇವಸ್ಥಾನದ ಮಾಜಿ ಮೊಕ್ತೇಸರರಾಗಿ ಸಕ್ರಿಯರಾಗಿದ್ದರು.ಅಡ್ಡೂರು ನಂದ್ಯ ಕ್ಷೇತ್ರದ ತೀಯ ಸಮಾಜ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಚೀರುಂಭ ಭಗವತಿ ತೀಯ

ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ಇದರ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ವಿದೇಶದಲ್ಲಿ ಉದ್ಯೋಗಿಯಾಗಿದ್ದು ಬಳಿಕ ಹುಟ್ಟೂರಿಗೆ ಮರಳಿ ತರಕಾರಿ ವ್ಯಾಪಾರ ನಡೆಸಿದ್ದ ಅವರು ಕಳೆದ ಎರಡೂವರೆ ದಶಕಗಳಿಂದ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

Leave a Comment