Coastal Bulletin

ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಜೈ ಹನುಮಾನ್ ಶಾಖೆ ಅಜಿಲಮೊಗರು ಇದರ ನೇತೃತ್ವದಲ್ಲಿ ಈಚೆಗೆ ಮಂಗಳೂರಿನ ಪಡೀಲ್ ನಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟ ಬಜರಂಗದಳ ಕಾರ್ಯಕರ್ತ ವಿಜಯ್ ಪುಣ್ಕೆದಡಿ ಇವರ ಮನೆಗೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ದಿನೋಪಯೋಗದ ಪಡಿತರ ಸಾಮಗ್ರಿಗಳನ್ನು ವಿತರಿಸಲಾಯಿತು‌.

ಕ್ಷೇತ್ರದ ಧರ್ಮದರ್ಶಿಗಳಾದ ದೇಜಪ್ಪ ಬಾಚಕೆರೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂಜೀವ ಪೂಜಾರಿ ಗುರುಕೃಪಾ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಇಡ್ಯಡ್ಕ ಮೋಹನ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರಪಾಡಿ ಅಶೋಕ್ ಶೆಟ್ಟಿ ಮತ್ತಿತರರು ಮೃತರ ಮನೆಯವರಿಗೆ

ದಿನೋಪಯೋಗಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಮುಂದಿನ ದಿನಗಳಲ್ಲಿ ದಿ. ವಿಜಯ ಅವರ ಮನೆಯವರಿಗೆ ಸಕಲ ರೀತಿಯಲ್ಲೂ ಸಹಕರಿಸುವುದಾಗಿ ಸಂಘಟನೆಯ ಪ್ರಮುಖರು ಈ ಸಂದರ್ಭ ಭರವಸೆ ನೀಡಿದರು.

ಈ ಸಂದರ್ಭ ತಿಂಗಳಾಡಿ ಸೀತಾರಾಮ ಪೂಜಾರಿ,ಸಂತೋಷ ಕುಲಾಲ್ ನೆಲ್ಯಪಲ್ಕೆ,ಅಭಿಷೇಕ ಕುದುರು, ಶಶಿಧರ ಬಾಚಕೆರೆ ಟಿ.ಕೇಶವ ಪೂಜಾರಿ . ಸಂಜೀವ ಪೂಜಾರಿ. ಮೊದಲಾದವರಿದ್ದರು.

Leave a Comment