ಬಂಟ್ವಾಳ :ತಾಲೂಕಿನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯುಧ ಪೂಜೆ ಹಾಗೂ ಮೊಸರು ಕುಡಿಕೆ ಉತ್ಸವ, ಹಾಗೂ ಪಿಲಿ ಗೊಬ್ಬು, ಕಾಲೇಜಿನ ಆವರಣದಲ್ಲಿ ಅ 31ರಂದು ಮಂಗಳವಾರ ಸಂಭ್ರಮದಿಂದ ನಡೆಯಿತು.
ಆಯುಧ ಪೂಜಾ ಪ್ರಯುಕ್ತ ದೇವರನ್ನು ಕಾಲೇಜಿನ ಅವರಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು, ಈ ಸಂದರ್ಭದಲ್ಲಿ ವಾದ್ಯ ಘೋಷ, ಚೆಂಡೆ, ನಾಸಿಕ್ ಬ್ಯಾಂಡ್, ಹುಲಿ ವೇಷಗಳು, ಹಾಗೂ ಗಾರ್ಬ ನೃತ್ಯ,ಮನ ರಂಜಿಸಿತು. ಮೈಸಾಸುರ ಮರ್ದಿನಿ ನೃತ್ಯ ರೂಪಕ ಗಮನ ಸೆಳೆಯಿತು.ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು, ಸಂಜೆ ವಿದ್ಯಾರ್ಥಿಗಳು
ಮೊಸರು ಕುಡಿಕೆಗಳನ್ನು ಹೊಡೆದು ಸಂಭ್ರಮಿಸಿದರು.
ಆಯುಧ ಪೂಜೆಯ ಮಹಾಮಂಗಳಾರತಿ ಮಧ್ಯಾಹ್ನ ನಡೆಯಿತು, ಈ ಸಂದರ್ಭದಲ್ಲಿ ಕೆನರಾ ಸಮೂಹ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ ರಂಗನಾಥ ಭಟ್, ಕಾಲೇಜಿನ ಪ್ರಾಂಶುಪಾಲ ಡಾ ನಾಗೇಶ್ ಹೆಚ್ ಆರ್, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














