Coastal Bulletin

ಬಂಟ್ವಾಳ: ನವೆಂಬರ್ 26 ರಂದು ಸಜೀಪಮೂಡ ಕಂದೂರಿನ ಬಜಾರ್ ಆಡಿಟೋರಿಯಂನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೆಳನ ನಡೆಯಲಿದ್ದು ಪ್ರಾಂತೀಯ ಸಮ್ಮೆಳನ ಸಮಿತಿ ಅಧ್ಯಕ್ಷರಾಗಿ ಮನೋರಂಜನ್ ಕೆ. ಆರ್. ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ತಪೋಧನ್ ಶೆಟ್ಟಿ, ಕೋಶಾಧಿಕಾರಿಯಾಗಿ ಉಮೇಶ್ ಸಾಲ್ಯಾನ್, ಮುಖ್ಯ ಸಲಹೆಗಾರರಾಗಿ ಪೂರ್ವ ರಾಜ್ಯಪಾಲರಾಗಿದ ದೇವದಾಸ್ ಭಂಡಾರಿ, ಗೀತ್ ಪ್ರಕಾಶ್, ವಸಂತ್ ಕುಮಾರ್ ಶೆಟ್ಟಿ ಆಯ್ಕೆಗೊಂಡರು.

ಪ್ರಾಂತ್ಯಧ್ಯಕ್ಷರ ಲಕ್ಷ್ಮಣ್ ಕುಲಾಲ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷರಾದ ಉಮೇಶ್ ಆಚಾರ್ ಸ್ವಾಗತಿಸಿ, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ತಪೋಧನ್ ಶೆಟ್ಟಿ ವಂದಿಸಿದರು.

Leave a Comment