ಬಂಟ್ವಾಳ: ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಕು.ಭಾರ್ಗವಿ ಬಾಯರ್ ಅತ್ಯುತ್ತಮ ಸಾಧನೆಗೈದು ಗಮನಸೆಳೆದಿದ್ದಾರೆ. 2025ನೇ ಸಾಲಿನ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ ಯಲ್ಲಿ ಕು.ಭಾರ್ಗವಿ ಬಾಯರ್ ಇವರು 82.5%ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ಈಕೆ ವೈಷ್ಣವಿ ನಾಟ್ಯಲಯ ಪುತ್ತೂರು ಇದರ ನಿರ್ದೇಶಕಿ ವಿದುಷಿ ಶ್ರೀಮತಿ ಯೋಗಿಶ್ವರಿ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆಯಾಗಿದ್ದು ಪ್ರಸ್ತುತ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಮುಕ್ಕ ಇಲ್ಲಿ
ತೃತೀಯ ವರ್ಷದ ಬಿ. ಟೆಕ್ ವಿದ್ಯಾರ್ಥಿನಿಯಾಗಿದ್ದಾರೆ. ಯಕ್ಷಗಾನ ಕಲಾವಿದೆಯೂ ಆಗಿರುವ ಭಾರ್ಗವಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತರಾದ ಯಕ್ಷಗಾನ ಕಲಾವಿದ ಬಾಯರ್ ಶಿವಪ್ಪ ಜೋಗಿ ಹಾಗೂ ಕುಸುಮ ದಂಪತಿಗಳ ಸುಪುತ್ರಿ.














