ಮಲ್ಲೂರು :ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ

Coastal Bulletin
ಮಲ್ಲೂರು :ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ

ಮಂಗಳೂರು :ಬದುಕಿಗೊಂದು ಆಸರೆ(ರಿ)ಮಲ್ಲೂರು ಮತ್ತು ಭಾರತೀಯ ಜನತಾ ಪಾರ್ಟಿ ಮಲ್ಲೂರು ಶಕ್ತಿ ಕೇಂದ್ರ ಇದರ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನ ಮಲ್ಲೂರಿನಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಈ ಅಭಿನಂದನೆ ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 7 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ತಲಾ 5000/- ವಿದ್ಯಾರ್ಥಿ ವೇತನ ವಿತರಿಸಲಾಯಿತು.ಆಫಘಾತದಲ್ಲಿ ಗಾಯಗೊಂಡಿದ್ದ ದೇಮ್ಮಲ್ಲೇ ನಿವಾಸಿಗೆ ರೂ 10000/- ಅರೋಗ್ಯ ನಿಧಿ ನೀಡಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕುಮಾರಿ ರಕ್ಷಾ ಮತ್ತು ಮೋಕ್ಷಿತ್ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಶ್ರೀ ನಿಧಿ ಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬದುಕಿಗೊಂದು ಆಸರೆ ಇದರ ಗೌರವ

ಅಧ್ಯಕ್ಷರಾದ ಪ್ರದೀಪ್ ನಾಯ್ಕ್, ರೈತ ಮೋರ್ಚಾ ಮಂಗಳೂರು ಉತ್ತರ ಬಿಜೆಪಿ ಇದರ ಅಧ್ಯಕ್ಷರಾದ ಪ್ರಕಾಶ್ ಆಳ್ವ, ಹಿಂದೂ ರುದ್ರಭೂಮಿ ಸಮಿತಿ ಮಲ್ಲೂರು ಇದರ ಅಧ್ಯಕ್ಷರಾದ ದಯಾನಂದ ಬದ್ರಿಯಾನಗರ, ಗ್ರಾಮಪಂಚಾಯತ್ ಸದಸ್ಯರಾದ ಸುಮಾ ಶೆಟ್ಟಿ ದೇಮ್ಮಲೇ, ಮಲರಾಯ ದೈವದ ಅರ್ಚಕರಾದ ಯೋಗೀಶ್ ಪೂಜಾರಿ, ಬೂತ್ ಅಧ್ಯಕ್ಷರಾದ ದೇವದಾಸ್ ಕುಟ್ಟಿಕಲಾ ಮತ್ತು ಬದುಕಿಗೊಂದು ಆಸರೆ ಇದರ ಅಧ್ಯಕ್ಷರಾದ ಲಕ್ಷ್ಮಣ್ ಆಚಾರ್ಯ ಮಲ್ಲೂರು ಉಪಸ್ಥಿತಿ ಇದ್ದರು.

ಕೀರ್ತನಾ ಮತ್ತು ತಂಡ ಪ್ರಾರ್ಥಿಸಿ, ದ್ರುವಲ್ ಸ್ವಾಗತಗೈದರು. ಸೋಹನ್ ಆಳ್ವ ಪ್ರಸ್ತವಿಕವಾಗಿ ಮಾತನಾಡಿ, ಮನೀಶ್ ಕಂಜಿಲಾಗುಡ್ಡೆ ವಂದಿಸಿದರು. ಯಶವಂತಿ ಕಜೆ. ನಿರೂಪಿಸಿದರು.

Leave a Comment