ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ , ಉದ್ಯಮಿ ಎಂ. ಅಣ್ಣಪ್ಪ ಪೈ ನಿಧನ.

Coastal Bulletin
ಕೆನರಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ , ಉದ್ಯಮಿ ಎಂ. ಅಣ್ಣಪ್ಪ ಪೈ ನಿಧನ.

ಮಂಗಳೂರು: ಹಿರಿಯ ಆಹಾರ ಉದ್ಯಮಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಂ. ಅಣ್ಣಪ್ಪ ಪೈ (74ವ) ಅಲ್ಪಕಾಲದ ಅಸ್ವಸ್ಥ್ಯದಿಂದ ಜೂ.29 ರಂದು ನಿಧನ ಹೊಂದಿದರು. ಅವರು ಪತ್ನಿ ನಿರ್ಮಲಾ ಪೈ ಪುತ್ರರಾದ ಉದ್ಯಮಿಗಳಾಗಿರುವ ಅರವಿಂದ ಪೈ, ಅಜಿತ್ ಪೈ ಅವರನ್ನು ಅಗಲಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಸಾಹುಕಾರ್ ಬಾಪ್ಪೈ ಮನೆ ತನಕ್ಕೆ ಸೇರಿದ್ದ ಅವರು ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದರು. ಪ್ರಾಡಕ್ಟ್ ವಿತರಕರಾಗಿ ತಂದೆಯ ಉದ್ಯಮದ ಮೂಲಕ ವ್ಯವಹಾರ ರಂಗದಲ್ಲಿ ತೊಡಗಿಕೊಂಡ ಅವರು 1984ರಲ್ಲೇ ಸ್ಟಾರ್ಟಪ್ ಮಾದರಿಯಲ್ಲಿ ಅಂದಿನ ಬೇಡಿಕೆಯ ಬಟಾಟೆ ಚಿಪ್ಸ್ ವರ್ತಕರಾಗಿ ಏಸ್ ಫುಡ್ ಪ್ರಾಡಕ್ಟ್ ಸಂಸ್ಥೆ ಆರಂಭಿಸಿ ಗುಣಮಟ್ಟ ಆಹಾರ ಉತ್ಪನ್ನಗಳ ರಫ್ತು ಉದ್ಯಮಿಯಾಗಿ ಬೆಳೆದರು. ವ್ಯಾವಹಾರಿಕ ಯಶಸ್ಸಿನ ಹಾದಿಯಲ್ಲಿ ಅವರು ಮೊಡಾರ್ನ್ ಕಿಚನ್, ಪ್ರೆಸ್ಟೋ ಫುಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ,ಆರ್.ಆರ್. ಪೈ ಆಂಡ್ ಕೋ ಸಂಸ್ಥೆಯ ಪಾಲುದಾರರಾಗಿದ್ದರು.

ಎರಡೂವರೆ ದಶಕಗಳ ಅವಧಿಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿಯ ಸದಸ್ಯರಾಗಿ, ಕಾರ್ಯದರ್ಶಿ, ಉಪಾಧ್ಯಕ್ಷರಾಗಿದ್ದ ಅವರು ಪ್ರಸ್ತುತ ಅಧ್ಯಕ್ಷರಾಗಿ ಕೆನರಾ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ, ಮಂಗಳೂರು ಮಿಡ್ ಟೌನ್ ರೋಟರಿ ಅಧ್ಯಕ್ಷರಾಗಿ, ದಾನಿಯಾಗಿ ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅವರು ಗುರುತಿಸಿಕೊಂಡಿದ್ದರು.

ಅವರ ಗೌರವಾರ್ಥ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಗುರುವಾರ ಸಂತಾಪ ಸಭೆಗಳು ಜರಗಿದ್ದು ಬಳಿಕ ರಜೆ ಘೋಷಿಸಲಾಗಿತ್ತು. ಮಣ್ಣಗುಡ್ಡೆಯ ಅವರ ಆರಾಧನಾ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಅಪಾರ ಸಂಖ್ಯೆಯಲ್ಲಿ ಗಣ್ಯರು, ನಿಕಟವರ್ತಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

 

Leave a Comment