Coastal Bulletin

ಬಂಟ್ವಾಳ:ಇಲ್ಲಿನ ನಂದಾವರ ಅರಮನೆಹಿತ್ಲು ಎಂಬಲ್ಲಿ ಸ್ಥಳೀಯ ವ್ಯಕ್ತಿ ಅಬ್ದುಲ್ ರಶೀದ್ ಎಂಬವರು ರಸ್ತೆ ಅತಿಕ್ರಮಿಸಿ ಆವರಣ ಗೋಡೆ ನಿರ್ಮಿಸಿ ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಸಹಿತ ಬಿಜೆಪಿ ಕಾರ್ಯಕರ್ತರು ಬಿ.ಸಿ.ರೋಡು ಆಡಳಿತ ಸೌಧ ಎದುರು ಬುಧವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಸ್ಥಳೀಯ ಮಹಿಳೆ ರೇಷ್ಮಾ ಎಂಬವರು ಅಲ್ಲಿನ ಸಜಿಪಮುನ್ನೂರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದು, ಇಲ್ಲಿನ ಸುಮಾರು 30 ಮನೆಗಳಿಗೆ ತೊಂದರೆಯಾಗುತ್ತದೆ ಎಂದು ವಿವರಿಸಿದ್ದರು. ಇದರಿಂದಾಗಿ ಅಲ್ಲಿನ ಪಿಡಿಒ ನೋಟಿಸ್ ನೀಡಿ ರಸ್ತೆ ತೆರವುಗೊಳಿಸುವಂತೆ ಅಬ್ದುಲ್ ರಶೀದ್ ಗೆ ಆದೇಶಿಸಿದ್ದರು.

ಈ ಪ್ರತಿಭಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಕೂಡಲೇ ಸ್ಥಳಕ್ಕೆ ತೆರಳಿ ರಸ್ತೆ ತೆರವುಗೊಳಿಸಿದರು. ಇನ್ಸ್ಪೆಕ್ಟರ್ ವಿವೇಕಾನಂದ ಮತ್ತಿತರ ಪೊಲೀಸರು ಬಂದೋಬಸ್ತು ಏರ್ಪಡಿಸಿದರು.

 ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಬಿ.ದೇವದಾಸ್ ಶೆಟ್ಟಿ, ಡೊಂಬಯ ಅರಳ, ರಮಾನಾಥ ರಾಯಿ, ಪ್ರಭಾಕರ ಪ್ರಭು, ಸುದರ್ಶನ್ ಬಜ, ಪುರುಷೋತ್ತಮ ಶೆಟ್ಟಿ, ನಂದರಾಮ ರೈ, ಪವನ್ ಕುಮಾರ್ ಶೆಟ್ಟಿ, ಪ್ರವೀಣ್ ಗಟ್ಟಿ, ಎನ್.ಧನಂಜಯ ಶೆಟ್ಟಿ, ಸುರೇಶ್ ಕೋಟ್ಯಾನ್, ಯಶೋಧರ ಕರ್ಬೇಟ್ಟು, ಮಾಧವ ಕರ್ಬೇಟ್ಟು, ಮಹೇಶ್ ಶೆಟ್ಟಿ, ಲಕ್ಷಣ್ ರಾಜ್, ಅಜಿತ್ ಶೆಟ್ಟಿ, ಪ್ರಶಾಂತ್ ಕೆಂಪುಗುಡ್ಡೆ, ಕಿಶೋರ್ ಶೆಟ್ಟಿ ಮತ್ತಿತರರು ಇದ್ದರು.

Leave a Comment