Coastal Bulletin

ಈ ಬಾರಿ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, 5 ರಿಂದ 7 ಲಕ್ಷದವರೆಗೆ ಆದಾಯ ಇರುವವರಿಗೆ ಯಾವುದೇ ಟ್ಯಾಕ್ಸ್ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಕರ್ನಾಟಕದ ಭದ್ರಾ ಮೇಲ್ದಂಡೆಗೆ 5300 ಕೋಟಿ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದು ಕೇಂದ್ರ ಬಜೆಟ್ 2023-2024 ಅನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂಲಸೌಕರ್ಯ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚ

ಜಿಡಿಪಿಯ 3.3 ಪ್ರತಿಶತದಲ್ಲಿದೆ ಎಂದು ಹೇಳಿದರು.ರೈಲ್ವೆ ಇಲಾಖೆಗೆ ದೊಡ್ಡ ಮಟ್ಟದ ಹಣ ಮೀಸಲಿಟ್ಟ 

ಕೇಂದ್ರ ಸರ್ಕಾರ 2.40 ಲಕ್ಷ ಕೋಟಿ ರೂಪಾಯಿ ಹಣ ರೈಲ್ವೆ ಇಲಾಖೆ ಅಭಿವೃದ್ಧಿಗೆ ಮೀಸಲಿರಿಸಿದೆ.

ಮಹಿಳೆಯರ ಹೆಸರಿನಲ್ಲಿ ರೂ 2

ಲಕ್ಷದವರೆಗೆ ಠೇವಣಿ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಸಣ್ಣ ಉಳಿತಾಯ ಯೋಜನೆಗೆ ಆದ್ಯತೆ ದೊರೆತಿದೆ. 2 ವರ್ಷಗಳ ಅವಧಿಯೊಂದಿಗೆ, 7.5% ಸ್ಥಿರ ಬಡ್ಡಿದರದೊಂದಿದೆ ಮುಂದರಿಸಬಹುದು ಅಥವಾ ಸಾಲ ಹಿಂತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ನೀಡಲಿದೆ.

ಕೇಂದ್ರ ಮುಂಗಡ ಪತ್ರದಲ್ಲಿ ಹಲವು ವಸ್ತುಗಳ ತೆರಿಗೆ ದರ ಬದಲಾವಣೆಗೊಳಿಸಿದೆ ಇದರಿಂದ ಟಿವಿ,ಮೊಬೈಲ್,ಸೈಕಲ್‌,ಜವುಳಿಗಳ ಬೆಲೆ ಕಡಿಮೆಯಾದರೆ ಚಿನ್ನ,ವಜ್ರ,ಸಿಗರೇಟ್ ಗಳ ಬೆಲೆ ದುಬಾರಿಯಾಗಲಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಂತೆ

ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ

Leave a Comment