ಬಿ.ಮೂಡ ಗ್ರಾಮಸ್ಥರು ಪಲ್ಲಮಜಲು ಮೂಲಕ ಕಳ್ಳಿಗೆ ಗ್ರಾಮಕ್ಕೆ ತಲುಪಲು ಬಳಸುವ ಅತೀ ಮುಖ್ಯ ರಸ್ತೆ ಪಲ್ಲಮಜಲು-ಬರ್ಕಟ-ಅರಂತಾಡೆ-ಕಂಜತ್ತೂರು-ಮಾಡಂಗೆ ರಸ್ತೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಈ ಹಿಂದೆ 15 ಲಕ್ಷ ಅನುದಾನ ಒದಗಿಸಿದ್ದರು. ಅದರಲ್ಲಿ ಮಾಡಂಗೆ-ಕಂಜತ್ತೂರುವರೆಗೆ ರಸ್ತೆ ಅಭಿವೃದ್ಧಿಗೊಂಡಿತ್ತು. ಬಾಕಿವುಳಿದ ರಸ್ತೆ ಅಭಿವೃದ್ಧಿಗಾಗಿ ಬಿ.ಮೂಡ ಗ್ರಾಮಸ್ಥರ ಪರವಾಗಿ ಪುರಸಭಾ ಸದಸ್ಯೆ ಚೈತನ್ಯ ಎ ದಾಸ್ ಹಾಗೂ ಬಂಟ್ವಾಳ ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಗಣೇಶ್ ದಾಸ್ ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದೀಗ ಈ ಬೇಡಿಕೆಯೂ ಈಡೇರಿದ್ದು, ಹೆಚ್ಚುವರಿ 15 ಲಕ್ಷ ರೂ. ಅನುದಾನವನ್ನು ಒದಗಿಸಿ ಒಟ್ಟು 30 ಲಕ್ಷ ರೂ ವೆಚ್ಚದಲ್ಲಿ ಪಲ್ಲಮಜಲು-ಬರ್ಕಟ-ಮಾಡಂಗೆ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ಇಂದು ಈ ರಸ್ತೆಯ ಗುದ್ದಲಿಪೂಜೆ ನೆರವೇರಿತು.
ಬಂಟ್ವಾಳ ಪುರಸಭಾ ಸದಸ್ಯೆ ಚೈತನ್ಯ ಎ ದಾಸ್ ಹಾಗೂ ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಜಾರಂದಗುಡ್ಡೆ ಈ ಕಾಮಗಾರಿಗೆ ಚಾಲನೆ ನೀಡಿದರು. ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ದೇವಂದಬೆಟ್ಟು ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಪಂಚಾಯತ್ ಸದಸ್ಯ ಮನೋಜ್ ವಳವೂರು, ವ್ಯವಸ್ಥಾಪನಾ ಸಮಿತಿ ಸದಸ್ಯ ದಿವಾಕರ ಶೆಟ್ಟಿ ಕುಪ್ಪಿಲಗುತ್ತು, ಪ್ರಮುಖರಾದ ದೇವಿಪ್ರಸಾದ್ ಎಂ
ದೇವಂದಬೆಟ್ಟು, ಗಣೇಶ್ ದಾಸ್ ಪಲ್ಲಮಜಲು, ಸಂಜೀವ ಪೂಜಾರಿ ಕಂಜತ್ತೂರು, ರತ್ನಾಕರ ಕಂಜತ್ತೂರು, ರಾಘವೇಂದ್ರ ಕುಪ್ಪಿಲ, ಉಮೇಶ್ ಪಲ್ಲಮಜಲು, ರಮೇಶ್ ಸುವರ್ಣ, ವನಜಾ ಕಂಜತ್ತೂರು, ಯಾದವ ಟೈಲರ್ ಹೊಸಹೊಕ್ಲು, ಮನೋಹರ ಶೆಟ್ಟಿ, ಸತೀಶ್ ಮಾಡಂಗೆ, ದಯಾನಂದ ಜಾರಂದಗುಡ್ಡೆ, ಕಿಶೋರ್ ಜಾರಂದಗುಡ್ಡೆ, ದೂಮಪ್ಪ ಮಾಡಂಗೆ, ದಿವಾಕರ ದೇರ್ಲಕ್ಕೆ, ಸುನೀಲ್ ಜಾರಂದಗುಡ್ಡೆ, ಸಿಬಿನ್ ಜಾರಂದಗುಡ್ಡೆ, ಸಂಪ್ರೀತ್ ಆಯರಗುಡ್ಡೆ, ಲೋಹಿತ್ ಜಾರಂದಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.














