Coastal Bulletin

ಬಂಟ್ವಾಳ: ಜ.14 ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದ ಬಂಟ್ವಾಳ ಬಿಜೆಪಿ ವತಿಯಿಂದ ನಡೆಯುವ " ಗ್ರಾಮವಿಕಾಸ ಯಾತ್ರೆ " "ಗ್ರಾಮದೆಡೆಗೆ ಶಾಸಕರ ನಡಿಗೆ " ಪಾದಯಾತ್ರೆ 6 ನೇ ದಿನವಾದ ಜ.19 ಗುರುವಾರ ಬೆಳಿಗ್ಗೆ ಅಮ್ಟೂರಿನಿಂದ ಪ್ರಾರಂಭವಾಯಿತು.

ಜ.18 ರಂದು ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಸಾರ್ವಜನಿಕ ಸಭೆ ಮುಗಿಸಿ ಬಳಿಕ ಶಾಸಕರು ಅಮ್ಟೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಶರತ್ ಕುಮಾರ್ ಅಮ್ಟೂರು ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.

  ಇಂದು ಬೆಳಿಗ್ಗೆ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಬಾರಿ ಕಾರ್ಯಕರ್ತರ ಜೊತೆಯಲ್ಲಿ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

  ಬಳಿಕ ವಂದೆ ಮಾತರಂ ಗೀತೆ ಹಾಡಿದ ಬಳಿಕ ಶಾಸಕ ರಾಜೇಶ್ ನಾಯ್ಕ್ ಅವರು ಭೂಮಿಗೆ ನಮಸ್ಕರಿಸಿ ಸೇರಿದ್ದ ಅಪಾರ ಕಾರ್ಯಕರ್ತರ ಜೊತೆ ಬಿಜೆಪಿಯ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.

  ಅಮ್ಟೂರು ಗ್ರಾಮದ ಕಾರ್ಯಕರ್ತರಿಂದ ದಾರಿಯುದ್ದಕ್ಕೂ ಅಭಿಮಾನಿಗಳಿಂದ ಗೌರವ , ಅಭಿನಂದನೆ ಸಲ್ಲಿಸಿದರು.

 ‌ಪಾದಯಾತ್ರೆಯಲ್ಲಿ ಸಾಗಿ ಬಂದ ಕಾರ್ಯಕರ್ತರಿಗೆ ಸಿಹಿತಿಂಡಿ, ತಂಪುಪಾನೀಯದ ಜೊತೆ ಸ್ವಾಗತ ನೀಡಿದರು.

  ಪಾದಯಾತ್ರೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಪ್ರಮುಖರಾದ ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಮಾದವ ಮಾವೆ, ಡೊಂಬಯ ಅರಳ,ರವೀಶ್ ಶೆಟ್ಟಿ ಕರ್ಕಳ,ಸುಲೋಚನ ಜಿ.ಕೆ.ಭಟ್, ಚೆನ್ನಪ್ಪ ಆರ್.ಕೋಟ್ಯಾನ್, ದಿನೇಶ್ ಅಮ್ಟೂರು, ರವೀಂದ್ರ ಕಂಬಳಿ,ಕಮಲಾಕ್ಷಿ ಪೂಜಾರಿ,

ಅರುಣ್ ರೋಷನ್ ರಮನಾಥ ರಾಯಿ,ದನಂಜಯ ಶೆಟ್ಟಿ ಸರಪಾಡಿ,ಶ್ರೀಕಾಂತ್ ಶೆಟ್ಟಿ, ಮನೋಜ್‌ ಕಟ್ಟೆಮಾರ್, ರೋನಾಲ್ಡ್ ಡಿ.ಸೋಜ,ರಮೇಶ್ ಕರಿಂಗಾಣ, ಪ್ರಭಾಕರ್ ಶೆಟ್ಟಿ, ವಿಠಲ ಪ್ರಭು, ಲಕ್ಮೀ ಪ್ರಭು, ಜನಾರ್ದನ ಬೊಂಡಾಲ, ವಜ್ರನಾಥ ಕಲ್ಲಡ್ಕ, ಜಯಂತ ಗೌಡ, ಮೋನಪ್ಪ ದೇವಸ್ಯ, ವಿಖ್ಯಾತ ಶೆಟ್ಟಿ, ಮಹಾಬಲ ಸಾಲಿಯಾನ್ ಮುಳಿ ಕೊಡಂಗೆ, ಸಂದೀಪ್ ಶೆಟ್ಟಿ, ಯತೀಶ್ ಮುಳಿಕೊಡಂಗೆ, ಗೋಪಾಲ ಪೂಜಾರಿ, ಕೌಶಲ್ ಶೆಟ್ಟಿ, ಜಿತೇಶ್ ಶೆಟ್ಟಿ, ಮಣೀಶ್ ಕುಮಾರ್ ಅಮ್ಟೂರು, ಸಂತೋಷ್ ರಾಯಿಬೆಟ್ಟು, ಯಶವಂತ ನಗ್ರಿ, ಮಹೇಶ್ ಶೆಟ್ಟಿ, ಸುಪ್ರೀತ್ ಆಳ್ವ, ಕಿಶೋರ್ ಕಟ್ಟೆಮಾರ್, ಸುಷ್ಮಾ,ಪವಿತ್ರ, ಪ್ರೇಮ, ಗೋಪಾಲ ಕೃಷ್ಣ ಪೂವಳ, ಎಲಿಯಾಸ್ ಡಿ.ಸೋಜ, ಹಿರಣ್ಮಯಿ, ಲಕ್ಮೀಗೋಪಾಲಾಚರ್ಯ, ದೇವಕಿ ದಿವಾಕರ ಪೂಜಾರಿ, ತ್ರಿವೇಣಿ, ಲಖಿತಾ ಆರ್ ಶೆಟ್ಟಿ, ಚರಣ್ ಜುಮಾದಿಗುಡ್ಡೆ, ಪ್ರವೀಣ್ ಗಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್,ಗಣೇಶ್ ರೈಮಾಣಿ, ಸುಷ್ಮಾಚರಣ್, ಸೀಮಾಮಾದವ, ಕಾರ್ತಿಕ್, ಕೃಷ್ಣಪ್ಪ ಶಾಂತಿಪಳಿಕೆ, ಹರ್ಷಿಣಿಪುಷ್ಪಾನಂದ, ಪ್ರೇಮ ಶೆಟ್ಟಿ, ಗೋಪಾಲ ಬಲ್ಯಾಯ, ವಿಶಾಲಾಕ್ಷಿ, ದೇವದಾಸ್ ಕೃಷ್ಣಾಪುರ, ಭಾಸ್ಕರ್ ಟೈಲರ್ ಕಾಮಾಜೆ ಜೊತೆಯಾದರು.

Leave a Comment