ಮಂಗಳೂರು : ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಭಾಷೆಯಾಗಿ ಆಯ್ಕೆ ಮಾಡಲು ಡಾ. ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ವರದಿ ಸಮಿತಿ ರೂಪಿಕರಿಸಿರುವುದು ತುಳುವರಲ್ಲಿ ಆಶಾದಾಯಕ ಭಾವನೆ ಮೂಡಿಸಿದೆ. ಅದೇ ರೀತಿ ಕರ್ನಾಟಕ ಸರಕಾರದ ಈ ತೀರ್ಮಾನ ಶ್ಲಾಘನೀಯವಾಗಿದೆ ಎಂದು ಡಾ. ಡಿ ವೀರೇಂದ್ರ ಹೆಗಡೆಯವರು ಅಭಿಪ್ರಾಯಪಟ್ಟರು. ಅವರು ಅಖಿಲ ಭಾರತ ತುಳು ಒಕ್ಕೂಟ ನೂತನ ಅಧ್ಯಕ್ಷರಾದ ಎ.ಸಿ ಭಂಡಾರಿಯವರು ಮತ್ತು ಪದಾಧಿಕಾರಿಗಳು ಹೆಗಡೆಯವರ ಭೇಟಿ ಸಂದರ್ಭದಲ್ಲಿ ನೂತನ ಸಮಿತಿಗೆ ಶುಭಾಶೀರ್ವಾದ ನೀಡಿ ಮಾತನಾಡಿದರು.
ಒಕ್ಕೂಟದ ನೂತನ ಅಧ್ಯಕ್ಷರಾದ ಎಸಿ ಭಂಡಾರಿ ಅವರು ಒಕ್ಕೂಟದ ಕಾರ್ಯ ಯೋಜನೆಗಳ ಬಗ್ಗೆ ಹೆಗಡೆಯವರಿಗೆ ಮನದಟ್ಟು ಮಾಡಿದರು. ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಮುಲ್ಕಿ ಕರುಣಾಕರ ಶೆಟ್ಟಿ, ಚಂದ್ರಹಾಸ ದೇವಾಡಿಗ
ಮೂಡಬಿದ್ರೆ, ಉಪಾಧ್ಯಕ್ಷರಾದ ತಾರನಾಥ್ ಶೆಟ್ಟಿ ಬೋಳಾರ, ವಿಜಯಲಕ್ಷ್ಮಿ ಶೆಟ್ಟಿ, ಪಿ. ಏ ಪೂಜಾರಿ, ಸುಖಲಾಕ್ಷಿ ಸುವರ್ಣ, ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ ಆಳ್ವ ಬದಿಯಡ್ಕ, ಶೋಭಾ ಕರುಣಾಕರ ಶೆಟ್ಟಿ ಮೊದಲಾದವರು ಜೊತೆಗಿದ್ದರು.














