Coastal Bulletin

ಬಂಟ್ಚಾಳ: ಕಳೆದ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರಿ ನೌಕರರು ಮಾನವೀಯ ನೆಲೆಯಲ್ಲಿ ಸರ್ಕಾರಕ್ಕೆ ನೂರಾರು ಕೋಟಿ ಮೊತ್ತದ ನೆರವು ನೀಡಿದ್ದು, ಇಂತಹ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗೆ ಸರ್ಕಾರವು ನಗದು ರಹಿತ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದೆ. ಮಾತ್ರವಲ್ಲದೆ ಕೇಂದ್ರ ಸರ್ಕಾರಿ ನೌಕರರ ಮಾದರಿ ವೇತನ ಶೀಘ್ರವೇ ಜಾರಿಗೊಳಿಸುವ ಸಾಧ್ಯತೆಯೂ ಇದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಷಡಕ್ಷರಿ ಹೇಳಿದ್ದಾರೆ

ಇಲ್ಲಿನ ಬಿ.ಸಿ.ರೋಡು ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಂಘದ ಸದಸ್ಯರ ಸಮಾಲೋಚನಾ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರಿ ನೌಕರರು ದುಡಿಮೆ ಜೊತೆಗೆ ಪಾರದರ್ಶಕ ಮತ್ತು ಮಾನವೀಯತೆ ಬೆಳೆಸಿಕೊಂಡಾಗ ಜನತೆಗೆ ಹತ್ತಿರವಾಗುತ್ತಾರೆ ಎಂದರು.

ಸರ್ಕಾರಿ ನೌಕರರ ಉದ್ಯೋಗ ಭದ್ರತೆ ನೀಡುವುದು ಸೇರಿದಂತೆ ದಾನಿಗಳ ನೆರವಿನಿಂದ ವಿವಿಧ ಅನುಕೂಲ ಮಾಡಿಕೊಡಲು ಸಂಘವು ಪಾರದರ್ಶಕವಾಗಿ ಅವಿರತ ಶ್ರಮಿಸುತ್ತಿದೆ. ರಾಜ್ಯದಲ್ಲಿ ಒಟ್ಟು 2.52ಲಕ್ಷ ಮಂದಿ ಎನ್ ಪಿಎಸ್ ನೌನಕರರಿಗೆ ಒಪಿಎಸ್ ಪದ್ಧತಿ ಜಾರಿಗೊಳಿಸಲು

ಸರ್ಕಾರ ಒಪ್ಪಿದೆ ಎಂದರು.

ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸಹಿತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿಪ್ರಸಾದ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ಬಸವರಾಜ್, ಸುಬ್ರಹ್ಮಣ್ಯ ಶೇರಿಗಾರ್, ದಿನಕರ್ ಶೆಟ್ಟಿ, ಸುಮಾಲಿನಿ, ವಿಮಲ್ ನೆಲ್ಯಾಡಿ, ಗಾಯತ್ರಿ ಕಂಬಳಿ, ಶಮಂತ್ ಮತ್ತಿತರರು ಇದ್ದರು. ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಕಾರ್ಯದರ್ಶಿ ಸಂತೋಷ್ ಕೊಟ್ಯಾನ್ ತುಂಬೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು. 

Leave a Comment