ಮಂಗಳೂರು:ತಂಗಿಯ ಒಡವೆಗಳನ್ನು ದೋಚಿಕೊಂಡು ಅಕ್ಕನೇ ತನ್ನ ಪ್ರಿಯತಮನ ಜೊತೆ ಪರಾರಿಯಾಗಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದ್ದು ಮಗಳನ್ನು ಹುಡುಕಿ ಕೊಡುವಂತೆ ತಂದೆಯೇ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುರತ್ಕಲ್ ನಿವಾಸಿ ಇಬ್ರಾಹಿಂ ಅವರ ಹಿರಿಯ ಮಗಳು ರಿಜ್ವಾನಾ(25) ಚೊಕ್ಕಬೆಟ್ಟಿ ಜಾಮಿಯಾ ಇಂಗ್ಲೀಷ್ ಮೀಡಿಯಂ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.ಗಂಡ ದುಬೈನಲ್ಲಿರುವ ಕಾರಣ ತಂದೆಯ ಮನೆಯಲ್ಲಿಯೇ ಉಳಿದಿದ್ದಳು. ಆಕೆಯ ತಂಗಿ ರಾಝ್ವಿನಾಳಿಗೆ ಕಳೆದ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದು,ಆಕೆಯ ಒಡವೆಗಳನ್ನು ತಂದೆಯ ಮನೆಯಲ್ಲಿಯೇ ಇರಿಸಿದ್ದಳು.ಆಭರಣ ಇರುವ ಕಪಾಟಿನ ಕೀ ಹಿರಿಯ ಮಗಳು ರಿಜ್ವಾನಳ ಕೈಯಲ್ಲೇ ಇತ್ತು.ನಾಪತ್ತೆಯಾದ ಹಿಂದಿನ ದಿನ ಹಣದ ಅವಶ್ಯಕತೆ ಇರುವುದರಿಂದ ಒಡವೆ ಅಡವಿಡಲು ಇಬ್ರಾಹಿಂ ಕಪಾಟು ಕೀ ಕೇಳಿದರೂ ರಿಜ್ವಾನ
ನಿರಾಕರಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಚೊಕ್ಕಬೆಟ್ಟಿನ ಜಾಮಿಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋದವಳು ವಾಪಾಸ್ ಮನೆಗೆ ಬರಲಿಲ್ಲ. ಆಕೆಯ ಮೊಬೈಲ್ ಪೋನ್ ಕೂಡ ಸ್ವಿಚ್ ಆಫ್ ಆಗಿದ್ದು ನಾಪತ್ತೆಯಾಗಿದ್ದಳು. ಮರುದಿನ ತಂದೆ ಸಂಶಯ ಬಂದು ಕಪಾಟಿನ ಬಾಗಿಲು ಒಡೆದು ನೋಡಿದ್ದು ಒಡವೆಗಳು ಕಾಣೆಯಾಗಿದ್ದವು.
ರಿಜ್ವಾನಾಗೆ ಗಂಡ ವಿದೇಶದಲ್ಲಿದ್ದರೂ, ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೀತಿ ಇತ್ತು ಎನ್ನಲಾಗಿದೆ.ಆತನೊಂದಿಗೆ ಒಡವೆ ಜೊತೆ ಪರಾರಿಯಾಗಿದ್ದಾಳೆಂದು ಆಕೆಯ ತಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.















