Coastal Bulletin

ಮಂಗಳೂರು: ಮಕ್ಕಳಿಲ್ಲದ ನೋವು ಅನುಭವಿಸುವವರಿಗೆ ಮಾತ್ರ ತಿಳಿಯುತ್ತದೆ. ಆದರೆ ಮಂಗಳೂರಿನ ದಂಪತಿ ಮಕ್ಕಳಿಲ್ಲದ ಕೊರಗನ್ನು ಬೀದಿ ನಾಯಿಗಳಿಗೆ ಅನ್ನಾಹಾರವನ್ನಿಕ್ಕಿ ಮಾನವೀಯತೆ ಮರೆಯುತ್ತಿದ್ದಾರೆ.

ಹೌದು ಮಂಗಳೂರಿನ ರಿಸರ್ವ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೂವಪ್ಪ ಕೆ ಮತ್ತು ಪತ್ನಿ ರಾಗಿಣಿ ಕೆ. ದಂಪತಿ ಈ ಕಾರ್ಯ ಮಾಡುತ್ತಿರುವವರು‌. ಪೂವಪ್ಪ ಕೆ.ಯವರು ಇಲಾಖೆಗೆ ಸೇರಿ 32 ವರ್ಷಗಳಾಗಿದ್ದು, ಕಳೆದ 15 ವರ್ಷಗಳಿಂದ ಈ ದಂಪತಿ ಮಂಗಳೂರಿನ

ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಅಲ್ಲಿಯೇ ಸುತ್ತಮುತ್ತಲ ಪರಿಸರದ ಬೀದಿ ನಾಯಿಗಳಿಗೆ ಬೆಳಗ್ಗೆ-ರಾತ್ರಿ ಎರಡು ಹೊತ್ತಿನ ಊಟವನ್ನು ನಿತ್ಯವೂ ಹಾಕುತ್ತಿದ್ದಾರಂತೆ. ತಿಂಗಳೊಂದಕ್ಕೆ ಈ ದಂಪತಿ ನಾಯಿಗಳ ಆಹಾರಕ್ಕಾಗಿಯೇ ಸುಮಾರು 15 ಸಾವಿರ ರೂ. ವ್ಯಯ ಮಾಡುತ್ತಿದ್ದಾರಂತೆ. 

Leave a Comment