ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಅವರು ಆರೋಪಿಯಾಗಿ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ನಟ ದರ್ಶನ್ ಅವರ ಖೈದಿ ನಂಬರ್ 6106 ಆಗಿದೆ. ಇದೀಗ, 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್, ಈ ಮೂಲಕ ತಮ್ಮ ಮೆಚ್ಚಿನ ನಟನಿಗೆ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ.
ನಟ ದರ್ಶನ್ ಜೈಲು ವಾಸದ ಖೈದಿ ನಂಬರ್ 6106 ಈಗ ಬೈಕ್,ಆಟೋ ಹಾಗೂ ಕಾರುಗಳ ಹಿಂದೆ ಹಾಗು ಮುಂದೆಯೂ ಕಂಡುಬರುತ್ತಿದ್ದು ಭಾರೀ ಟ್ರೆಂಡಿಂಗ್ ಸೃಷ್ಟಿಯಾಗಿದೆ. ಖೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಭಾರೀ ಟ್ರೆಂಡಿಂಗ್ ಆಗಿದೆ. ಬಹಳಷ್ಟು ಬೈಕ್,ಆಟೋಗಳ ಹಿಂದೆ ಕೂಡ ಇದೇ ಖೈದಿ ನಂಬರ್ ಸ್ಟಿಕ್ಕರ್ ಕಾಣಸಿಗುತ್ತಿದ್ದು, ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ. ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಬೇಡಿಕೆ ಬಂದಿದ್ದು,
ಮೊಬೈಲ್ ಅಂಗಡಿಯವರು ಮೈ ಕೆರೆದುಕೊಳ್ಳಲೂ ಕೂಡ ಆಗದೇ ಫುಲ್ ಬ್ಯುಸಿ ಆಗಿದ್ದಾರೆ.
ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ ಹಾಕಿಸಿರುವ ನೂರಾರು ಫ್ಯಾನ್ಸ್, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿನ ರಸ್ತೆಯಲ್ಲಿ ಕಂಡು ಬರುತ್ತಿವೆ. ಇದೇ ವೇಳೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿರುವ ಸಂದೇಶ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ.ತನ್ನನ್ನು ಭೇಟಿಯಾಗಲು ಜೈಲಿನ ಬಲಿ ಬರಬೇಡಿ ಎಂದು ಅಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ವಿನಂತಿಸಿದ್ದಾರೆ.









