ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲು ನಿತ್ಯ ನೂರಾರು ಅಭಿಮಾನಿಗಳು ಜೈಲಿನತ್ತ ಬರುತ್ತಿದ್ದಾರೆ. ಅದರಂತೆ ದರ್ಶನ್ ಅವರನ್ನು ನೋಡಲೇಬೇಕು ಎಂದು ಜೈಲಿನ ಬಳಿ ಬಂದಿರುವ ಜಾಲಹಳ್ಳಿಯ ನಿವಾಸಿ ವಿಶೇಷಚೇತನ ಅಭಿಮಾನಿ ಸೌಮ್ಯ ಎಂಬುವವರು, ನನ್ನ ಅಣ್ಣ ದರ್ಶನ್ ಅವರನ್ನು ನೋಡಲೇಬೇಕು ಎಂದು ಹಠ ಹಿಡಿದಿದ್ದಾರೆ.‘ಇನ್ನು ದರ್ಶನ್ ಅವರು ಕೊಲೆ ಮಾಡಿಲ್ಲ, ಅವರು ಆರೋಪಿಯಾಗಿದ್ದಾರೆ ಅಸ್ಟೇ. ದರ್ಶನ್ ಅಣ್ಣ ಜೈಲು ಸೇರಿದ್ದಾಗಿನಿಂದಲೂ ಊಟ-ನಿದ್ದೆ ಬಿಟ್ಟಿದ್ದೇನೆ. ನನಗೇನಾದರೂ ಪರವಾಗಿಲ್ಲ. ನನ್ನ ಅಣ್ಣನಿಗೆ ನಾನು ನೋಡಬೇಕು. ಅಧಿಕಾರಿಗಳು ಅನುಮತಿ ನೀಡದಿದ್ದರೂ ನಾನೂ ಇಲ್ಲೇ ಕುಳಿತು ಕೊಳ್ಳುತ್ತೇನೆ’.‘ದರ್ಶನ್ ಅವರು ಯಾರಿಗೂ ಗೊತ್ತಾಗದೇ ಸಹಾಯ ಮಾಡುವ ಗುಣವಿದೆ. ನಮ್ಮ ಕುಟುಂಬ ನಿರ್ವಹಣೆಗೆ ಆಟೋ ಸಹ ಕೊಡಿಸಿದ್ದಾರೆ. ಈ ವಿಚಾರ ನಾವು ಈಗ ಹೇಳುತ್ತಿದ್ದೇವೆ ಅಸ್ಟೇ. ಪ್ಲೀಸ್ ದರ್ಶನ್ ಅಣ್ಣನನ್ನು ನೋಡಲು ಬಿಡಿ’ ಎಂದು ವಿಶೇಷಚೇತನ ಅಭಿಮಾನಿ ಕಣ್ಣೀರು ಹಾಕಿದ್ದಾರೆ.
ಜೈಲಿನಿಂದಲೇ ಮನವಿ ಮಾಡಿರುವ ನಟ ದರ್ಶನ್ ಜೈಲಾಧಿಕಾರಿಗಳ ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡದಂತೆ ದರ್ಶನ್ ಕೋರಿದ್ದಾರೆ ಎನ್ನಲಾಗಿದೆ.
‘ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ
ನಿರಾಸೆಯಿಂದ ವಾಪಸ್ ಹೋಗುವುದು ಬೇಡ’ ಎಂದು ದರ್ಶನ್ ಅವರು ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಹೆಸರಿನ ವಿಶೇಷ ಚೇತನ ಕೂಡ ಆಗಮಿಸಿದ್ದ.
ಈ ರೀತಿ ಆಗಮಿಸಿದವರಿಗೆ ದರ್ಶನ್ ಭೇಟಿ ಅಸಾಧ್ಯ. ಹೀಗಾಗಿ, ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಪಾಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.










