ಬಂಟ್ವಾಳ :ಜೂ.29ರಂದು ರೋಟರಿ ಬಂಟ್ವಾಳ ಬ್ಲಡ್ ಸೆಂಟರ್ ಉದ್ಘಾಟನೆ.

Coastal Bulletin
ಬಂಟ್ವಾಳ :ಜೂ.29ರಂದು ರೋಟರಿ ಬಂಟ್ವಾಳ ಬ್ಲಡ್ ಸೆಂಟರ್ ಉದ್ಘಾಟನೆ.

ಬಂಟ್ವಾಳ: ಸುಮಾರು 85 ಲಕ್ಷ ರೂ ವೆಚ್ಚದಲ್ಲಿ, 56.43 ಲಕ್ಷ ರೂ ರೋಟರಿಯ ಅಂತಾರಾಷ್ಟ್ರೀಯ ಗ್ಲೋಬಲ್ ಗ್ರಾಂಟ್ ಮೂಲಕ, ರೋಟರಿ ಕ್ಲಬ್ ಬಂಟ್ವಾಳದ ಇದರ ಹಲವು ವರ್ಷಗಳ ಕನಸು, ಮಹತ್ಕಾಂಕ್ಷಿ ಯೋಜನೆಯಾದ ರೋಟರಿ ಬಂಟ್ವಾಳ ಬ್ಲಡ್ ಸೆಂಟರ್ ಜೂ.29ರಂದು ಶನಿವಾರ ಸಂಜೆ 4 ಗಂಟೆಗೆ ಬಿ ಸಿ ರೋಡ್ ರೋಟರಿ ಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ಹೇಳಿದರು.

ಅವರು ಬಿ.ಸಿ.ರೋಡಿನಲ್ಲಿ ಜೂ 27ರಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ ಉದ್ಘಾಟಿಸಳಿದ್ದು, ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಟ್ರಸ್ಟಿ ವೇ.ಮೂ. ಜನಾರ್ದನ ವಾಸುದೇವ ಭಟ್ ಆಶೀರ್ವಚನ ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ಭಾರತ್ ಬೀಡಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಾಯ ಎಂ. ಪೈ., ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಪೂರ್ವ ಗವರ್ನರ್ ಕೃಷ್ಣ ಶೆಟ್ಟಿ, ನಿಕಟಪೂರ್ವ ಗವರ್ನರ್ ಎನ್. ಪ್ರಕಾಶ್ ಕಾರಂತ್ ಮತ್ತುತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬೆಳುವಾಯಿ ವಿನಾಯಕ ಕುಡ್ವ ಅವರ ಸಹಕಾರದಲ್ಲಿ

56.43 ಲಕ್ಷ ಗ್ಲೋಬಲ್ ಗ್ರಾಂಟ್ ಲಭಿಸಿದ್ದು ಭಾರತ್ ಬೀಡಿಯಿಂದ 5 ಲಕ್ಷ ರೂಪಾಯಿ ಆರ್ಥಿಕ ಸಹಕಾರದೊಂದಿಗೆ ಒಟ್ಟು 85 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬ್ಲಡ್ ಸೆಂಟರ್ ಸ್ಥಾಪಿಸಲಾಗಿದ್ದು ದಿನದ 24 ಗಂಟೆಗಳ ಕಾಲ ಸೇವೆ ನೀಡಲಿದೆ. ಬ್ಲಡ್ ಬ್ಯಾಂಕ್‌ಗೆ ಬೇಕಾದ ಸಿಬ್ಬಂದಿಗಳನ್ನು ಈಗಾಗಲೇ ನೇಮಿಸಿಕೊಳ್ಳಲಾಗಿದ್ದು ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ ಎಂದರು. ಬ್ಲಡ್ ಸೆಂಟರ್‌ನ ನಿರ್ವಹಣೆಗೆ ಒಂದು ಸಮಿತಿಯನ್ನು ರಚಿಸಲಾಗಿದ್ದು ರಕ್ತದಾನ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ರೋಟರಿ ಸದಸ್ಯರಾದ ನಾರಾಯಣ ಹೆಗ್ಡೆ, ಮುರಳೀಧರ ಪ್ರಭು, ಡಾ. ಆತ್ಮರಂಜನ್ ರೈ, ಸದಾಶಿವ ಬಾಳಿಗ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Comment