Coastal Bulletin

ಬೆಂಗಳೂರು: ಝೀ ಕನ್ನಡದಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಆದರೆ ಈ ಸೀರಿಯಲ್‌ ತಂಡ ಈಗ ಭಾರೀ ಸುದ್ದಿಯಲ್ಲಿದೆ. ಕೆಂಗೇರಿ ಬಳಿಯ ಹೋಟೆಲ್‌ನಲ್ಲಿ ಕುಡಿದು ಗಲಾಟೆ ಮಾಡಿದ ವಿಚಾರವಾಗಿ ಗಟ್ಟಿಮೇಳ ಧಾರವಾಹಿ ತಂಡ‌ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ  ಎಫ್ಐಆರ್ ದಾಖಲಾಗಿದೆ.

ಕೆಂಗೇರಿಯಲ್ಲಿರುವ ಜಿಂಜರ್ ಲೇಕ್‌ವ್ಯೂವ್ ಹೊಟೆಲ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡುತ್ತಿದ್ದ ತಂಡವನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ವಾಗ್ವಾದಕ್ಕಿಲಿದು ಗಲಾಟೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಈ ವಿಚಾರವಾಗಿ ರಕ್ಷಿತ್, ರಂಜನ್, ರವಿ ಚಂದ್ರನ್, ಅನುಷಾ, ಅಭಿಷೆಕ್, ಶರಣ್ಯ, ರಾಕೇಶ್ ಕುಮಾರ್ ಹೀಗೆ ಒಟ್ಟು ಏಳು ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.

Leave a Comment