ಪುಷ್ಪ’ (Pushpa) ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಹೈಪ್ ಹುಟ್ಟಿಸಿದ್ದು ಅದರ ಹಾಡುಗಳಿಂದ. ಅದರಲ್ಲೂ ಆ ಸಿನಿಮಾದ ಐಟಂ ಹಾಡು ‘ಊ ಅಂಟಾವ ಮಾವ ಊಹು ಅಂಟಾವ’ ಹಾಡಂತೂ ಭಾರಿ ಕ್ರೇಜ್ ಹುಟ್ಟಿಸಿತ್ತು. ಸಮಂತಾ (Samantha) ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ‘ಪುಷ್ಪ’ ಸಿನಿಮಾ ಹಿಟ್ ಆದ ಕಾರಣಗಳಲ್ಲಿ ಐಟಂ ಸಹ ಒಂದು. ಇದೀಗ ‘ಪುಷ್ಪ 2’ ಸಿನಿಮಾನಲ್ಲಿಯೂ ಐಟಂ ಸಾಂಗ್ ಇರಲಿದ್ದು, ಈ ಬಾರಿ ಯಾವ ಪ್ರಮುಖ ನಟಿಯನ್ನು ಐಟಂ ಹಾಡಿಗಾಗಿ ಕರೆತರಬೇಕು ಎಂದು ಚಿತ್ರತಂಡ ಹಲವು ತಿಂಗಳುಗಳಿಂದ ತಲೆ ಕೆಡಿಸಿಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಬಾಲಿವುಡ್ನ ಹೊಸ ಕ್ರಶ್, ‘ಬಾಬಿ 2’ ಕನ್ನಡದಲ್ಲಿ ‘ಅತ್ತಿಗೆ 2’ ಅನ್ನು ಕರೆತರಲಾಗುತ್ತಿದೆ.
ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿಗೆ ‘ಬಾಬಿ 2’ ಎಂಬ ಅಡ್ಡ ಹೆಸರಿದೆ. ರಣ್ಬೀರ್ ಕಪೂರ್ ನಟಿಸಿದ್ದೌ ‘ಅನಿಮಲ್’ ಸಿನಿಮಾನಲ್ಲಿ ನಾಯಕ ರಣ್ವಿಜಯ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡ ಯುವತಿಯ ಪಾತ್ರದಲ್ಲಿ ತೃಪ್ತಿ ನಟಿಸಿದ್ದರು, ಹಾಗಾಗಿ ತೃಪ್ತಿಗೆ ‘ಬಾಬಿ 2’ ಎಂಬ ಅಡ್ಡ ಹೆಸರಿನಿಂದ ನೆಟ್ಟಿಗರು ಕರೆದಿದ್ದರು. ‘ಅನಿಮಲ್’ ಸಿನಿಮಾನಲ್ಲಿ ತಮ್ಮ ನಟನೆಯ ಜೊತೆಗೆ ಗ್ಲಾಮರ್ನಿಂದಲೂ ತೃಪ್ತಿ ಸಖತ್ ಗಮನ ಸೆಳೆದಿದ್ದರು. ತೃಪ್ತಿ ಹಾಗೂ ರಣ್ಬೀರ್ರ ಬೆಡ್ರೂಂ ಸೀನ್ ನಾಟಿ ಪ್ರೇಕ್ಷಕರಿಗೆ ಬಲು ಇಷ್ಟವಾಗಿತ್ತು.
ಅದನ್ನೇ ಗಮನದಲ್ಲಿಟ್ಟುಕೊಂಡು ಇದೀಗ ‘ಪುಷ್ಪ 2’ ಸಿನಿಮಾದ ನಿರ್ದೇಶಕ ಸುಕುಮಾರ್ ತೃಪ್ತಿ ದಿಮ್ರಿಯನ್ನು ತಮ್ಮ ಸಿನಿಮಾಕ್ಕೆ ಕರೆತರುತ್ತಿದ್ದಾರೆ. ‘ಪುಷ್ಪ 2’ ಸಿನಿಮಾನಲ್ಲಿ ಐಟಂ ಹಾಡು ಬಹಳ ಪ್ರಮುಖವಾದದ್ದಾಗಿದ್ದು, ಈ
ಹಾಡಿಗೆ ಅಲ್ಲು ಅರ್ಜುನ್ ಜೊತೆಗೆ ತೃಪ್ತಿ ದಿಮ್ರಿ ನರ್ತಿಸಲಿದ್ದಾರೆ. ತೃಪ್ತಿ ದಿಮ್ರಿ ಒಳ್ಳೆಯ ನಟಿ, ಗ್ಲಾಮರ್ ಕ್ವೀನ್ ಆಗಿರುವ ಜೊತೆಗೆ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ. ಅಲ್ಲು ಅರ್ಜುನ್ ಸಹ ಒಳ್ಳೆಯ ಡ್ಯಾನ್ಸರ್ ಆಗಿದ್ದು, ಈ ಇಬ್ಬರ ಜೋಡಿ ತೆರೆಯ ಮೇಲೆ ಚೆನ್ನಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಶೇಷವೆಂದರೆ ‘ಅನಿಮಲ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು, ಅಲ್ಲಿ ತೃಪ್ತಿ ದಿಮ್ರಿ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಈಗ ‘ಪುಷ್ಪ 2’ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಾಯಕಿ, ಈಗ ಈ ಸಿನಿಮಾದಲ್ಲಿಯೂ ತೃಪ್ತಿ ಗ್ಲಾಮರ್ ಗೊಂಬೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸಹ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಲ್ಲು ಅರ್ಜುನ್ ಅಭಿಮಾನಿಗಳ ಲೆಕ್ಕಾಚಾರ.









