ಮಂಗಳೂರು :ಇತ್ತೀಚಿಗೆ ಅಂತರ ಧರ್ಮದ ವಿವಾಹವು ಕೋಮು ಸ್ವರೂಪ ಪಡೆಯುತ್ತಿದ್ದು ಗಲಭೆ, ಸಾಮರಸ್ಯ ಹಾಳು ಮಾಡುತ್ತಿರುವ ಘಟನೆಗಳು ರಾಜ್ಯದಲ್ಲಿ ಜರುಗುತ್ತಿವೆ.ಕೆಲವು ವಿವಾಹ ನೋಂದಣಿ ಕಚೇರಿಗಳಲ್ಲಿ ಸರಿಯಾದ ಕ್ರಮದಲ್ಲಿ ದಾಖಲೆ ಪರಿಶೀಲಸದೇ, ನೋಟೀಸ್ ಬೋರ್ಡ್ ಗೆ ಪ್ರತಿ ಹಾಕದೇ ವಿವಾಹ ಮಾಡುವ ಬಗ್ಗೆ ದೂರುಗಳಿದ್ದು ತಮ್ಮ ಕಚೇರಿಯಲ್ಲಿ ಮತಾಂತರ ತಡೆ -2022 ಆಕ್ಸ್ ಸೇರಿದಂತೆ ಯಾವುದೇ ಕಾನೂನಿನ ಲೋಪಗಳು ಜರುಗದಂತೆ ಜಾಗ್ರತೆ ವಹಿಸಿ ಕೋಮು ಸೂಕ್ಷ್ಮ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶ್ರೀರಾಮ ಸೇನೆ ದ ಕ ಜಿಲ್ಲಾ ಘಟಕವು ಮೇ 24ರಂದು ಸೋಮವಾರ ತಾಲೂಕು ವಿವಾಹ ನೋಂದಣಾಧಿಕಾರಿಯವರಿಗೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ದ ಕ ಜಿಲ್ಲಾ ಘಟಕದ ವಿಭಾಗೀಯ ಅಧ್ಯಕ್ಷ ಉರ್ವಸ್ಟೋರ್ ಮಧು, ಜಿಲ್ಲಾ ವಕ್ತಾರ ಯೋಗೇಶ್ ಫರಂಗಿಪೇಟೆ,ಸುರತ್ಕಲ್ ವಲಯಾಧ್ಯಕ್ಷ ನವೀನ್ ಕೋಡಿಕಲ್, ನಗರ ಕಾರ್ಯದರ್ಶಿ
ಮೋಹನ್ ಪದವಿನಂಗಡಿ, ಪ್ರಖಂಡ ಅಧ್ಯಕ್ಷ ರವಿರಾಜ್ ಮಣ್ಣಗುಡ್ಡ , ಸಂಘಟನಾ ಕಾರ್ಯದರ್ಶಿ ಕಿಶೋರ್ ನೀರುಮಾರ್ಗ , ನಗರಾಧ್ಯಕ್ಷ ಜಯೇಶ್ ಸಚ್ಚು ಅರುಣ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು










