ರೇಣುಕಾಸ್ವಾಮಿ ಹತ್ಯೆ ಪ್ರಕರಣ :ಕೋರ್ಟ್ ಆವರಣದೊಳಗೆ ಅಭಿಮಾನಿಗಳಿಂದ ದರ್ಶನ್ ಪರ ಜೈಕಾರ!

Coastal Bulletin
ರೇಣುಕಾಸ್ವಾಮಿ ಹತ್ಯೆ ಪ್ರಕರಣ :ಕೋರ್ಟ್ ಆವರಣದೊಳಗೆ ಅಭಿಮಾನಿಗಳಿಂದ ದರ್ಶನ್ ಪರ ಜೈಕಾರ!

ನಟ ದರ್ಶನ್​ಗೆ ಮತ್ತೆ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿ ಮುಂದುವರಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆರೋಪಿ ಆಗಿರುವ ಅವರನ್ನು ಇಂದು (ಜೂನ್​ 20) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಮುಗಿಸಿ ಹೊರಬರುವಾಗ ದರ್ಶನ್​ರನ್ನು ನೋಡಿ ಅಪ್ಪಟ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪ ದರ್ಶನ್​ ಹಾಗೂ ಸಹಚರರ ಮೇಲಿದೆ.

ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ  (Pavithra Gowda) ಸೇರಿ ಒಟ್ಟು 17 ಮಂದಿಯನ್ನು 24ನೇ ಎಸಿಎಂಎಂ  ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ  ಕಳುಹಿಸಲಾಗಿದ್ದು,ಉಳಿದಂತೆ ದರ್ಶನ್ (A2) ಸೇರಿ ರಾಜು (A9) ,ವಿನಯ್ (A10) ಹಾಗೂ

ಪ್ರದೋಶ್ (A14) ಪೊಲೀಸ್ ವಶಕ್ಕೆ ನೀಡಲಾಗಿದೆ.  ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಅಂದರೆ ಶನಿವಾರದವರೆಗೆ ಪೊಲೀಸ್‌ ಕಸ್ಟಡಿಯಲ್ಲಿರಲಿದ್ದಾರೆ.ಇನ್ನು ಮಿಕ್ಕವರಲ್ಲಿ ರವಿಶಂಕರ್ ಹಾಗೂ ಕಾರ್ತಿಕ್ ಈಗಾಗಲೇ ಜೈಲಿನಲ್ಲಿ ಇದ್ದಾರೆ. ನಿನ್ನೆ ಕೋರ್ಟ್ ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿಖಿಲ್ ನಾಯಕ್‌ ನನ್ನು ಕೂಡ ಜೈಲಿಗೆ ಕಳುಹಿಸಲಾಗಿದೆ.

Leave a Comment