ಬಿ.ಸಿ.ರೋಡು: ಪೆಟ್ರೋಲ್-ಡಿಸೇಲ್ ದರ ಏರಿಕೆ ವಿರುದ್ಧ ಆಕ್ರೋಶ. ಬಿಜೆಪಿ ವತಿಯಿಂದ ಪ್ರತಿಭಟನೆ, ಹೆದ್ದಾರಿ ತಡೆ.

Coastal Bulletin
ಬಿ.ಸಿ.ರೋಡು: ಪೆಟ್ರೋಲ್-ಡಿಸೇಲ್ ದರ ಏರಿಕೆ ವಿರುದ್ಧ ಆಕ್ರೋಶ. ಬಿಜೆಪಿ ವತಿಯಿಂದ ಪ್ರತಿಭಟನೆ, ಹೆದ್ದಾರಿ ತಡೆ.

ಬಂಟ್ವಾಳ: ರಾಜ್ಯದಲ್ಲಿ ಬಿಟ್ಟಿ ಭಾಗ್ಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರವು ದಿಢೀರನೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಆರೋಪಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಪೆಟ್ರೋಲ್ -ಡಿಸೇಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು ವಿವಿಧ ಇಲಾಖೆಗಳ ಅನುದಾನ ದುರ್ಬಳಕೆಯಾಗುತ್ತಿದೆ ಎಂದು ಅವರು ಆರೋಪಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, 'ಬಿಟ್ಟಿ ಭಾಗ್ಯ' ಎಂಬುದು ಕಾಂಗ್ರೆಸ್ ನಿಂದ ಹುಟ್ಟಿದ ತಳಿ. ಈ ಬಿಟ್ಟಿ ಭಾಗ್ಯದಿಂದ 'ಗರೀಬೀ ಹಠಾವೋ ಬದಲಾಗಿ ಗರೀಬೀ ಬಚಾವೋ' ಆಗಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮತ್ತಿತರರು ಮಾತನಾಡಿದರು. ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಪೂಜಾ ಪೈ, ರಾಮದಾಸ ಬಂಟ್ವಾಳ, ಬಿ.ದೇವದಾಸ ಶೆಟ್ಟಿ, ಮಾಧವ

ಎಸ್.ಮಾವೆ, ವಿಕಾಸ್ ಪುತ್ತೂರು, ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ಎ.ಗೋವಿಂದ ಪ್ರಭು, ಬಿ.ದಿನೇಶ ಭಂಡಾರಿ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಲಖಿತಾ ಆರ್.ಶೆಟ್ಟಿ, ಮೋನಪ್ಪ ದೇವಸ್ಯ, ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಸುರೇಶ್ ಕೋಟ್ಯಾನ್, ಪುರುಷೋತ್ತಮ ಸಾಲ್ಯಾನ್, ಪ್ರಭಾಕರ ಪ್ರಭು, ಯಶೋಧರ ಕರ್ಬೆಟ್ಟು , ಆನಂದ ಶಂಭೂರು, ರೊನಾಲ್ಡ್ ಡಿಸೋಜ, ರತ್ನಕುಮಾರ್ ಚೌಟ, ಸತೀಶ ಪೂಜಾರಿ ಸಿದ್ಧಕಟ್ಟೆ, ಖಾಲಿದ್ ನಂದಾವರ, ಶೇಖರ ಶೆಟ್ಟಿ ಕುಕ್ಕಿಪಾಡಿ, ಸಂತೋಷ್ ಕುಮಾರ್ ಬೆಟ್ಟು, ಮಚ್ಚೇಂದ್ರ ಸಾಲ್ಯಾನ್, ಶ್ರೀಧರ ಶೆಟ್ಟಿ ಪುಳಿಂಚ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಕೇಶವ ದೈಪಲ, ಸೀಮಾ ಮಾಧವ, ಹಷರ್ಿಣಿ ಪುಷ್ಪಾನಂದ, ಪ್ರೇಮನಾಥ ಶೆಟ್ಟಿ ಅಂತರ, ಗೀತಾ ಚಂದ್ರಶೇಖರ್, ಚಿದಾನಂದ ರೈ ಕಕ್ಯ ಮತ್ತಿತರರು ಇದ್ದರು.

Leave a Comment