ಬಂಟ್ವಾಳ :ಕೆನರಾ ಕಾಲೇಜಿನ ರಾ.ಸೆ.ಯೋ ಘಟಕ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ವತಿಯಿಂದ ದ.ಕ.ಹಿ ಪ್ರಾ.ಶಾಲೆ ಕೊಡ್ಮಣ್ಣು ಇಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ಗಿಡಗಳನ್ನು ನೀಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಕೆನರಾ ಕಾಲೇಜಿನ ದತ್ತು ಗ್ರಾಮವಾದ ಕೊಡ್ಮಣ್ಣು ಶಾಲಾ ಆವರಣ ಹಾಗೂ ಊರಿನ ಸ್ಮಶಾನದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಟಿ.ಭಾಸ್ಕರ ರಾವ್,ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯನಿ ಭವಾನಿ
ಶಂಕರಿ, ದೇವದಾಸ್ ಕಂಬಳ ಕೋಡಿ, ಹರೀಶ್ ಕುಮಾರ್ ಕೊಡ್ಮಣ್ ರಾಸೇಯೋ ಅಧಿಕಾರಿಗಳಾದ ಸೀಮಾ ಪ್ರಭು. ಎಸ್, ಎಂ ಕೀರ್ತನ ಭಟ್,ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಬಬಿತ ಎಸ್, ಸ್ಮಿತಾ ಎಂ, ದೈಹಿಕ ಶಿಕ್ಷಣ ನಿರ್ದೇಶಕರದ ಕಾರ್ತಿಕ್ ಎನ್ ಉಪಸ್ಥಿತರಿದ್ದರು.









