ಬಂಟ್ವಾಳ:ಪಶ್ಚಿಮ ಬಂಗಾಳದ ಸಿಲಿಗುರಿ ಎಂಬಲ್ಲಿ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಶನ್ ವತಿಯಿಂದ ಈಚೆಗೆ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿದ್ದ ರಿಧನ್ವಾ ಡಿ.ಗಾಣಿಗ ಬೆಳ್ಳಿ ಪದಕ ಗಳಿಸಿದ್ದಾರೆ.
ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆಟ್ಸ್ರ್ ವಿದ್ಯಾರ್ಥಿನಿ ಆಗಿರುವ ರಿಧನ್ವಾ ಡಿ.ಗಾಣಿಗ ಇವರು -50 ಬಾಲಕಿಯರ ಲೈಟ್ ಕಾನ್ಟೆಕ್ಸ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದರು. ಈಕೆ ಮಂಗಳೂರು ಸೈಂಟ್ ಅಲೋಸಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು,
ಈಕೆಗೆ ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆಟ್ಸ್ರ್ ಸಂಸ್ಥೆ ಮುಖ್ಯಶಿಕ್ಷಕ ನಿತಿನ್ ಎನ್.ಸುವರ್ಣ ಮತ್ತು ಶಿಕ್ಷಕ ಶಿವಪ್ರಸಾದ್ ತರಬೇತಿ ನೀಡಿದ್ದಾರೆ.
ಈಕೆ ಮಂಗಳೂರು ಯೆಯ್ಯಾಡಿ ನಿವಾಸಿ ಧನ್ ರಾಜ್ ಮತ್ತು ಪಾಣೆಮಂಗಳೂರು ಸೌಮ್ಯಾ ಮರ್ದೋಳಿ ದಂಪತಿ ಪುತ್ರಿ.









