ದೆಹಲಿಯಲ್ಲಿ ಬಿಸಿಗಾಳಿಯ ಶಾಖದ ಅಲೆಗೆ ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಸಾವು.

Coastal Bulletin
ದೆಹಲಿಯಲ್ಲಿ ಬಿಸಿಗಾಳಿಯ ಶಾಖದ ಅಲೆಗೆ ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಸಾವು.

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ಹೀಟ್ ಸ್ಟ್ರೋಕ್ ಮತ್ತು ಶಾಖದ ಬಳಲಿಕೆಯಿಂದ ಹಲವರು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ದೆಹಲಿಯಲ್ಲಿ ಬಿಸಿಗಾಳಿ ಬೀಸುತ್ತಿರುವ ಶಾಖದ ಅಲೆಯು ಸಾವುನೋವುಗಳು ಮತ್ತು ಹೀಟ್‌ಸ್ಟ್ರೋಕ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ 48 ಗಂಟೆಗಳಲ್ಲಿ ದಿಲ್ಲಿಯ ಸುತ್ತಮುತ್ತಲಿನ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಗೆ ಸೇರಿದ 50 ಮಂದಿಯ ಮೃತದೇಹಗಳು ಸಿಕ್ಕಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜೂನ್ 11 ರಿಂದ 19 ರವರೆಗಿನ ಶಾಖದ ಅಲೆಯಿಂದಾಗಿ ದೆಹಲಿಯಲ್ಲಿ 192 ನಿರಾಶ್ರಿತ ಸಾವುಗಳು ದಾಖಲಾಗಿವೆ ಎಂದು ನಿರಾಶ್ರಿತರಿಗಾಗಿ ಕೆಲಸ ಮಾಡುವ ಎನ್‌ಜಿಒ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಮಾಹಿತಿ ಕೊಟ್ಟಿದೆ.

ಈ ಬಿಸಿಯ ಶಾಖದ ಮುನ್ನೆಚ್ಚರಿಕೆ

ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಸ್ಥಳೀಯ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಹೀಟ್ ಸ್ಟ್ರೋಕ್ ರೋಗಿಗಳಿಗೆ ಆದ್ಯತೆಯ ಮೇಲೆ ಚಿಕಿತ್ಸೆ ನೀಡಲು ಸಲಹೆ ನೀಡಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಅಧಿಕಾರಿಗಳಿಗೆ ನಿರ್ದೇಶನಗಳನ್ನೂ ನೀಡಿದ್ದಾರೆ.

ಹಟ್ ವೇವ್‌ನಿಂದಾಗಿ ವಿಶ್ವದಾದ್ಯಂತ 2 ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಜ್ ಯಾತ್ರೆ ವೇಳೆ ತಾಪಮಾನ ಹೆಚ್ಚಾಗಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ. ಒಂದಲ್ಲ, ಎರಡಲ್ಲ ಬರೋಬ್ಬರಿ 645 ಹಜ್ ಯಾತ್ರಿಕರು ಸಾವನ್ನಪ್ಪಿರೋ ಬಗ್ಗೆ ಮಾಹಿತಿ ಸಿಕ್ಕಿವೆ.

Leave a Comment