ದೊಡ್ಮನೆಯಲ್ಲಿ ಬಿರುಕು: ವಿಚ್ಚೇದನಕ್ಕೆ ಮುಂದಾದ 'ಯುವರಾಜ್- ಶ್ರೀದೇವಿ' ಜೋಡಿ.

Coastal Bulletin
ದೊಡ್ಮನೆಯಲ್ಲಿ ಬಿರುಕು: ವಿಚ್ಚೇದನಕ್ಕೆ ಮುಂದಾದ 'ಯುವರಾಜ್- ಶ್ರೀದೇವಿ' ಜೋಡಿ.

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ 'ಯುವ' ಸಿನಿಮಾ ಮೂಲಕ ಸುದ್ದಿಯಾಗಿದ್ದ ದೊಡ್ಮನೆ ಕುಡಿ ಇದೀಗ ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಟ ಯುವ ರಾಜಕುಮಾರ್ ಅವರ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿ ಆಗಿದೆ.

ವರನಟ ಡಾ.ರಾಜಕುಮಾರ್ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಪುತ್ರ ನಟ ಯುವ ರಾಜಕುಮಾರ್ ಅವರು 2019ರಲ್ಲಿ ಶ್ರೀದೇವಿ ಅವರೊಂದಿಗೆ ಮದುವೆ ಆಗಿದ್ದರು. ವೈಯಕ್ತಿಕ ಕಾರಣಗಳಿಂದ ಅವರ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪತ್ನಿಗೆ ಯುವ ಅವರು ನೋಟಿಸ್ ನೀಡಿದ್ದಾರೆ.

292.933px;">

ಮೂಲತಃ ಮೈಸೂರಿನವರಾದ ಶ್ರೀದೇವಿ ಭೈರಪ್ಪ ಅಲ್ಲಿಯೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿದ್ದಾರೆ.. ಯುವ ಅವರನ್ನು ಮದುವೆಯಾಗುದಕ್ಕಿಂತ ಏಳು ವರ್ಷ ಮುಂಚೆಯಿಂದಲೇ ಇಬ್ಬರ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು.. ಪ್ರೀತಿಗೆ ಉಭಯ ಕುಟುಂಬಗಳ ಒಪ್ಪಿಗೆ ಪಡೆದು ಸಪ್ತಪದಿ ತುಳಿದಿದ್ದರು.ಸದ್ಯ ಕಳೆದ ಆರೇಳು ತಿಂಗಳಿಂದ ರಾಜ್‌ಕುಟುಂಬದಿಂದ ದೂರವಿರುವ ಯುವ ಪತ್ನಿ ಶ್ರೀದೇವಿ ಬೈರಪ್ಪ ವಿದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ.

Leave a Comment