ಬಂಟ್ವಾಳ :ತಾಲೂಕು ಕುಲಾಲ ಸುಧಾರಕ ಸಂಘ (ರಿ) ಪೊಸಳ್ಳಿ ಇದರ 2024-2025ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಕೃಷ್ಣಪ್ಪ ಬಿ ಜೋಗೊಟ್ಟು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆಯಾಗಿ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಪ್ರಧಾನ ಕಾರ್ಯದರ್ಶಿ ರಮೇಶ್ ಸಂಚಯಗಿರಿ, ಜೊತೆ ಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ ಅಲೆತ್ತೂರು ಮತ್ತು
ಗಣೇಶ ಮರ್ದೋಳಿ, ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್ ರಾಮನಗರ, ಸಂಘಟನಾ ಕಾರ್ಯದರ್ಶಿ ಸತೀಶ್ ಸಂಪಾಜೆ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚೆಂದ್ರ, ಸೇವಾ ದಳಪತಿ ಗಣೇಶ್ ಬೆದ್ರಕಾಡು, ಆಯ್ಕೆಯಾಗಿರುತ್ತಾರೆ.









