ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಗೆ ಪ್ರತಿಷ್ಠಿತ ಪ್ಲಾಟಿನಂ ಪ್ಲಸ್ ಅವಾರ್ಡ್.

Coastal Bulletin
ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಗೆ ಪ್ರತಿಷ್ಠಿತ ಪ್ಲಾಟಿನಂ ಪ್ಲಸ್ ಅವಾರ್ಡ್.

ಬಂಟ್ವಾಳ :ರೋಟರಿ ಜಿಲ್ಲಾ ಗವರ್ನರ್ ರೋ ಹೆಚ್ ಆರ್ ಕೇಶವ್ ಇವರ ಸಾರಥ್ಯದಲ್ಲಿ ಮೈಸೂರಿನಲ್ಲಿ ನಡೆದ ಅವಾರ್ಡ್ ನೈಟ್ ಸಮಾರಂಭದಲ್ಲಿ ಈ ವರ್ಷದ ಅತ್ಯುತ್ತಮ ಸಾಧನೆಯೊಂದಿಗೆ ಗೌರವಿಸಲ್ಪಡುವ ಪ್ರತಿಷ್ಠಿತ ಪ್ಲಾಟಿನಂ ಪ್ಲಸ್ ಅವಾರ್ಡ್ ಅನ್ನು ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಯು ತನ್ನ ಮುಡಿಗೇರಿಸಿಕೊಂಡಿತು.

ನಾರ್ತ್ ಅವೆನ್ಯೂ ಮೈಸೂರು ಯೂನಿಯನ್ ಇಲ್ಲಿ ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಇವರು ಡಿಸ್ಟ್ರಿಕ್ಟ್ ಗವರ್ನರ್ ಮೇಜರ್ ಡೋನರ್ ಹೆಚ್ ಆರ್ ಕೇಶವ್ , ಪಿಡಿಜಿ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಹಾಗೂ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಇವರ ಗೌರವ ಉಪಸ್ಥಿತಿಯಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಯ 23-24 ನೇ ಸಾಲಿನ ಅಧ್ಯಕ್ಷರಾದ ರೋ ಪೀ ಎಚ್ ಎಫ್ ಗಣೇಶ್ ಶೆಟ್ಟಿ ಇವರಿಗೆ ಈ ವರ್ಷದ ಅತ್ಯುತ್ತಮ ಸಾಧನೆಗಾಗಿ ಪ್ಲಾಟಿನಮ್ ಪ್ಲಸ್ ಅವಾರ್ಡ್ ಹಸ್ತಾಂತರಿಸಿದರು. 

ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷರಾದ ರೋ ಸತೀಶ್ ಕುಮಾರ್, ಜೋನಲ್

ಲೆಫ್ಟಿನೆಂಟ್ ರೋ ಪಲ್ಲವಿ ಕಾರಂತ್, ರೋ ಗಣೇಶ್ ಸಾಲಿಯಾನ್, ರೋ ಪ್ರಶಾಂತ್ ಕಾರಂತ್, ರೋ ಶೇಷಪ್ಪ ಮೂಲ್ಯ, ರೋ ಮೈಲಾರಿ ಗೌಡ ಇವರು ಉಪಸ್ಥಿತರಿದ್ದರು.

ಕಳೆದ ಮೂರು ವರ್ಷದ ಹಿಂದೆ ಸ್ಥಾಪನೆಗೊಂಡ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಸಂಸ್ಥೆಯು ತನ್ನ ಅತ್ಯುತ್ತಮ ಸೇವ ಕಾರ್ಯಗಳಿಗಾಗಿ ಪ್ರಥಮ ವರ್ಷದಲ್ಲಿ ರೋ ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ದ್ವಿತೀಯ ವರ್ಷದಲ್ಲಿ ಪಲ್ಲವಿ ಕಾರಂತ್ ಹಾಗೂ ಈ ವರ್ಷದಲ್ಲಿ ರೋ ಗಣೇಶ್ ಶೆಟ್ಟಿ, ಇವರ ನೇತೃತ್ವದಲ್ಲಿ ಸತತವಾಗಿ ಪ್ಲಾಟಿನಮ್ ಪ್ಲಸ್ ಅವಾರ್ಡನ್ ಪಡಕೊಂಡು ರೋಟರಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಕ್ಲಬ್ ಆಗಿ ಮೂಡಿ ಬಂದಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ

Leave a Comment