ಲೋಕಸಭೆ - ಪ್ರಧಾನಿ ಮೋದಿ ಜೊತೆಗೆ 71 ಸಂಸದರು ಪ್ರಮಾಣ ವಚನ

Coastal Bulletin
ಲೋಕಸಭೆ - ಪ್ರಧಾನಿ ಮೋದಿ ಜೊತೆಗೆ 71 ಸಂಸದರು ಪ್ರಮಾಣ ವಚನ

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಾಖಲೆ ಮಾಡಿದ್ದಾರೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಸಂಜೆ ಸರಿಯಾಗಿ 7.15ಕ್ಕೆ ದೇವರ ಹೆಸರಲ್ಲಿ ನರೇಂದ್ರ ದಾಮೋದರ್‌ ದಾಸ್‌ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.

ನರೇಂದ್ರ ಮೋದಿ ಅವರ ನಂತರ ಹಿರಿಯ ನಾಯಕರಾದ ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಕೂಡ ಎನ್‌ಡಿಎ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಮೋದಿ ಸಂಪುಟದಲ್ಲಿ ಹಲವು ಹಿರಿಯಯರ ಜೊತೆಗೆ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಹಲವಾರು ಹೊಸ ಮುಖಗಳನ್ನು ಈ ಬಾರಿ ಮೋದಿ ಕ್ಯಾಬಿನೆಟ್ 3.0ಗೆ ಅವಕಾಶವನ್ನ ನೀಡಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜೆ 7.15ಕ್ಕೆ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದಾದ ಬಳಿಕ ಮೋದಿ ಸಂಪುಟದ ಸದಸ್ಯರು ಒಬ್ಬೊಬ್ಬರಾಗಿ ಬಂದು ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 71 ಸಚಿವರು ಪ್ರಮಾಣ ಮೋದಿ ಮಂತ್ರಿ ಮಂಡಲವನ್ನು ಸೇರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ರಾಷ್ಟ್ರಪತಿ ಭವನದಲ್ಲಿ 71 ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರಲ್ಲಿ ಸುಮಾರು 28 ಮೇಲ್ಜಾತಿ, 27 OBC, 10 ದಲಿತ, 5 ಬುಡಕಟ್ಟು ಮತ್ತು 2 ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಂಸದರು ಇದ್ದಾರೆ.

ಅಮಿತ್ ಶಾ, ಎಸ್

ಜೈಶಂಕರ್, ಮನ್ಸುಖ್ ಮಾಂಡವಿಯಾ, ರಾಜನಾಥ್ ಸಿಂಗ್, ಜಿತಿನ್ ಪ್ರಸಾದ್, ಜಯಂತ್ ಚೌಧರಿ, ಧರ್ಮೇಂದ್ರ ಪ್ರಧಾನ್, ರವನೀತ್ ಬಿಟ್ಟು, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಮನೋಹರ್ ಲಾಲ್ ಖಟ್ಟರ್, ಜಿತೇಂದ್ರ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಸಂಜಯ್ ಸೇಠ್, ರಾಮ್ ಮೋಹನ್ ನಾಯ್ಡು, ಸಂಜಯ್ ಸೇಠ್ , ಸುಕಾಂತ್ ಮಜುಂದಾರ್, ಪ್ರಹ್ಲಾದ್ ಜೋಶಿ, ಜೆಪಿ ನಡ್ಡಾ, ಗಿರಿರಾಜ್ ಸಿಂಗ್, ಲಾಲನ್ ಸಿಂಗ್, ಸತೀಶ್ ಚಂದ್ರ ದುಬೆ,ಸಿಆರ್ ಪಾಟೀಲ್, ಪಂಕಜ್ ಚೌಧರಿ, ಅನುಪ್ರಿಯಾ ಪಟೇಲ್, ಬಿಎಲ್ ವರ್ಮಾ, ರಕ್ಷಾ ಖಡ್ಸೆ, ಪ್ರತಾಪ್ ರಾವ್ ಜಾಧವ್, ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ, ರಾವ್ ಇಂದರ್ಜಿತ್ ಸಿಂಗ್, ಕೃಷ್ಣಪಾಲ್ ಗುರ್ಜಾರ್, ಭೂಪೇಂದ್ರ ಯಾದವ್, ಭಗೀರಥ ಚೌಧರಿ, ಅನ್ನಪೂರ್ಣಾ ದೇವಿ, ಶೋಭಾ ಕರಂದ್ಲಾಜೆ, ಶೋಭಾ ಕರಂದ್ಲಾಜೆ, ಹೆಚ್.ಡಿ. ನಿತ್ಯಾನಂದ ರೈ,ಎಸ್ಪಿ ಬಘೇಲ್, ಕಮಲೇಶ್ ಪಾಸ್ವಾನ್, ಅಜಯ್ ತಮ್ತಾ, ರಾಮದಾಸ್ ಅಠಾವಳೆ, ವೀರೇಂದ್ರ ಕುಮಾರ್, ಸಾವಿತ್ರಿ ಠಾಕೂರ್, ಅರ್ಜುನ್ ರಾಮ್ ಮೇಘವಾಲ್, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ರಾಮನಾಥ್ ಠಾಕೂರ್, ಜುಯಲ್ ಓರಮ್, ಶ್ರೀಪಾದ್ ಯೆಸ್ಸೋ ನಾಯಕ್, ಸರ್ಬಾನಂದ ಸೋನೋವಾಲ್ ಸಚಿವ ಸಂಪುಟ ಸೇರಿದ್ದಾರೆ.

Leave a Comment