ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ, 2023ರ ಬಹು ನಿರೀಕ್ಷಿತ ಸಿನಿಮಾ 'ಕಾಟೇರ' ದೇಶದ ವಿವಿಧ ರಾಜ್ಯಗಳಲ್ಲಿ ರಿಲೀಸ್ ಆಗಿ ಕೋಟಿ ಕೋಟಿ ಬಾಚಿದೆ. ಸಂಭ್ರಮದಲ್ಲಿ ಅಭಿಮಾನಿಗಳು ಮಿಂದು ಸಂಭ್ರಮಿಸಿದ್ದಾರೆ. 3 ದಿನದಲ್ಲಿ ಈ ಸಿನಿಮಾ ಸುಮಾರು 60 ಕೋಟಿ ರೂಪಾಯಿ ಗಳಿಸಿದ್ದು ಹೊಸ ದಾಖಲೆ ನಿರ್ಮಿಸಿದೆ ಎನ್ನಲಾಗಿದೆ.
ಕಾಟೇರ' ಅಬ್ಬರವು ಶುರುವಾಗಿದ್ದು ಕೆಲವು ಥಿಯೇಟರ್‌ಗಳಲ್ಲಿ ಜಾಗವೇ ಸಿಗ್ತಿಲ್ಲ. ಅದರಲ್ಲೂ ನಿನ್ನೆ ಭಾನುವಾರ ಆದ ಹಿನ್ನೆಲೆ ಕೆಲವು ಥಿಯೇಟರ್‌ನಲ್ಲಿ ಅಭಿಮಾನಿಗಳು ನಿಂತುಕೊಂಡೇ ಸಿನಿಮಾ ನೋಡಿದ್ದಾರೆ. ಫ್ಯಾನ್ಸ್ ಪಾಲಿನ ಡಿಬಾಸ್ ದರ್ಶನ್‌ರ ಬಹು ನಿರೀಕ್ಷಿತ ಚಿತ್ರ ಇದಾಗಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಕಣ್ತುಂಬಿಕೊಂಡಿದ್ದಾರೆ. ಕಾಟೇರ ನೂರಾರು ಥಿಯೇಟರ್‌ನಲ್ಲಿ ಸಾವಿರಾರು ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ.
ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ.
ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿರುವ ಹಿನ್ನೆಲೆಯಲ್ಲಿ ವಿದೇಶದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ದರ್ಶನ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್ ಗುರುವಾರ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ಮೊದಲ ದಿನ ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿತ್ತು. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿತ್ತು. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದೆ. ಮೊದಲ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿತ್ತು.














